ಅಂಬಿಗರ ಚೌಡಯ್ಯ ಜಯಂತಿ

Ambigar jayanti
Published on

ಬೀದರ್: ನಗರ ಸೇರಿದಂತೆ ಜಿಲ್ಲಾದ್ಯಂತ ನಿಜಶರಣ ಅಂಬಿಗರ ಚೌಡಯ್ಯ ಜಯಂತ್ಯುತ್ಸವ ಗುರುವಾರ ಆಚರಿಸಲಾಯಿತು. ಕರೊನಾ ಹಿನ್ನೆಲೆಯಲ್ಲಿ ಎಲ್ಲೆಡೆ ಸರಳವಾಗಿ ಕಾರ್ಯಕ್ರಮ ಸಂಘಟಿಸಲಾಗಿತ್ತು.

ಜಿಲ್ಲಾಡಳಿತದಿಂದ ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಿದ ಕಾರ್ಯಕ್ರಮದಲ್ಲಿ ಅಂಬಿಗರ ಚೌಡಯ್ಯ ಭಾವಚಿತ್ರಕ್ಕೆ ಅಪರ ಜಿಲ್ಲಾಧಿಕಾರಿ ರುದ್ರೇಶ ಘಾಳಿ ಪೂಜೆ, ಪುಷ್ಪನಮನ ಸಲ್ಲಿಸಿದರು. ಚೌಡಯ್ಯ ಅವರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಸರಿಯಾದ ದಾರಿಯಲ್ಲಿ ನಡೆಯಲು ಸಾಧ್ಯ ಎಂದರು.

ಸಾಹಿತಿ ಪಾರ್ವತಿ ಸೋನಾರೆ ಮಾತನಾಡಿ, ಅಂಬಿಗರ ಚೌಡಯ್ಯ ಕ್ರಾಂತಿಕಾರಿ ವಚನಕಾರರು. ನೇರ ಮತ್ತು ದಿಟ್ಟ ಮಾತನಾಡುತ್ತ ಸಮಾಜದಲ್ಲಿನ ಅನೇಕ ಅಂಕು, ಡೊಂಕುಗಳನ್ನು ತಿದ್ದಿದರು ಎಂದು ತಿಳಿಸಿದರು.

ಪ್ರಮುಖರಾದ ಮಾರುತಿ ಮಾಸ್ಟರ್, ವಿಜಯಕುಮಾರ ಸೋನಾರೆ, ಎಂ.ಪಿ.ಮುದಾಳೆ, ನಂದಕುಮಾರ ಜಂಬಗೀಕರ್, ಸತ್ಯಪ್ರಕಾಶ ಕೋಳಿ, ಸುನೀಲ ಖಾಶೆಂಪುರ, ಷಣ್ಮುಖಪ್ಪ ಶೇಖಾಪುರ, ಶರಣಪ್ಪ ಖಾಶೆಂಪುರ, ಸುನೀಲ ಭಾವಿಕಟ್ಟಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ರಾಮ ಸಿಂಧೆ ಇತರರಿದ್ದರು.

ಬಿಜೆಪಿ ಕಚೇರಿ: ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಅಂಬಿಗರ ಚೌಡಯ್ಯ ಜಯಂತ್ಯುತ್ಸವ ಆಚರಿಸಲಾಯಿತು. ನಗರಾಧ್ಯಕ್ಷ ಹಣಮಂತ ಬುಳ್ಳಾ, ಪ್ರಮುಖರಾದ ಸುನೀಲ ಗೌಳಿ, ರಾಜಕುಮಾರ ಜಮಾದಾರ, ರವೀಂದ್ರ ಬಾಳೆಬಾಯಿ, ದೀಪಕ ಚಿದ್ರಿ, ಅವಿನಾಶ ಬರಿದಾಬಾದೆ, ಕಿಶನ್ ಜಮಾದಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net