ಅಂಬಾರಿ ಆನೆ ಅರ್ಜುನನ ಸ್ಮರಣೆ

Elephant
Published on

ಚಿತ್ರದುರ್ಗ: ಕಾಡಾನೆ ಸೆರೆ ಕಾರ್ಯಾರಣೆಯಲ್ಲಿ ಒಂಟಿ ಸಲಗದ ತಿವಿತಕ್ಕೆ ಒಳಗಾಗಿ ಸಾವನ್ನಪ್ಪಿದ ಅಂಬಾರಿ ಆನೆ ಅರ್ಜುನನ ಭಾವಚಿತ್ರಕ್ಕೆ ವೀರವನಿತೆ ಒನಕೆ ಓಬವ್ವ ವೃತ್ತದಲ್ಲಿ ಮಂಗಳವಾರ ಪುಷ್ಪನಮನ ಸಲ್ಲಿಸಲಾಯಿತು. ಈ ಮೂಲಕ ಮದಕರಿ ಬಳಗದಿಂದ ಸ್ಮರಿಸಲಾಯಿತು.

ನಗರಸಭೆ ಮಾಜಿ ಅಧ್ಯಕ್ಷ ಬಿ.ಕಾಂತರಾಜ್ ಮಾತನಾಡಿ, ಮೈಸೂರು ದಸರಾದಲ್ಲಿ ನಾಡದೇವಿಯ ಉತ್ಸವ ಮೂರ್ತಿಯೊಂದಿಗೆ ಅಂಬಾರಿ ಹೊತ್ತು ಸತತ 8 ವರ್ಷ ಪ್ರತಿನಿಧಿಸಿದ್ದ ಅರ್ಜುನ, 22 ವರ್ಷ ಇದೇ ಮಹೋತ್ಸವದಲ್ಲಿ ಪಾಲ್ಗೊಂಡಿತ್ತು. ನಾಡಿನ ವೈಭವದ ಮೆರುಗನ್ನು ಹೆಚ್ಚಿಸಿತ್ತು. ಇದು ನಮ್ಮ ರಾಜ್ಯಕ್ಕೆ ಹೆಮ್ಮೆಯ ಸಂಕೇತ ಎಂದು ದುಃಖಿತರಾದರು.

ನಟ ದಿ.ಪುನೀತ್ ರಾಜಕುಮಾರ್ ಅವರನ್ನು ಕಳೆದುಕೊಂಡು ನಾಡು ಹೇಗೆ ದುಃಖ ನುಂಗಿಕೊಂಡಿತ್ತೊ, ಅದೇ ರೀತಿ ಅರ್ಜುನ ಆನೆ ಅಸುನೀಗಿದಾಗಲು ಆಗುತ್ತಿದೆ. ಅತ್ಯಂತ ಪ್ರೀತಿಗೆ ಪಾತ್ರವಾಗಿದ್ದ ಈ ಆನೆಯನ್ನು ಕರ್ನಾಟಕದ ಜನ ಎಂದಿಗೂ ಮರೆಯಲಾರರು ಎಂದು ಸ್ಮರಿಸಿದರು.

ಕಿರಿಯ ವಯಸ್ಸಿನ ಒಂಟಿ ಸಲಗ ಸೆರೆ ಹಿಡಿಯಲು ಇನ್ನೂ ಹಲವು ವರ್ಷ ಬದುಕಬೇಕಿದ್ದ ಹಿರಿಯ ಆನೆಯಾದ ಅರ್ಜುನನನ್ನು ಬಳಸಿಕೊಂಡಿದ್ದರಿಂದಾಗಿ ದುರ್ಮರಣಕ್ಕೀಡಾಗಿದೆ. ಇದಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳ ನಿರ್ಲಕ್ಷೃವೂ ಕಾರಣ. ಇಂತಹ ಘಟನೆ ಮರುಕಳಿಸದಂತೆ ಎಚ್ಚರವಹಿಸಬೇಕು ಎಂದು ಸರ್ಕಾರಕ್ಕೆ ಕೋರಿದರು.

ಕಾಂಗ್ರೆಸ್ ಮುಖಂಡ ಅಂಜಿನಪ್ಪ, ನಗರಸಭೆ ಸದಸ್ಯ ದೀಪು, ಮಾಜಿ ಸದಸ್ಯ ತಿಪ್ಪೇಸ್ವಾಮಿ, ಬಳಗದ ಗೋಪಾಲಸ್ವಾಮಿ ನಾಯಕ, ಪರಮೇಶ್ವರಪ್ಪ, ಈಶ್ವರ್, ಕೇಶವ, ಅನಿಲ್‌ಕುಮಾರ್, ಅರುಣ್, ಹರೀಶ್‌ಕುಮಾರ್, ನಾಗರಾಜ್, ಚೇತನ, ಪವನಕುಮಾರ್, ಸತೀಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net