ಅಂಬಾದೇವಿ ಮೂರ್ತಿ ಪ್ರತಿಷ್ಠಾಪನೆ ಅದ್ದೂರಿ

Untitled design (19)
ಮಾನ್ವಿ ತಾಲೂಕಿನ ಉಮಳಿಹೊಸೂರು ಗ್ರಾಮದಲ್ಲಿ ಅಂಬಾದೇವಿ ಮೂರ್ತಿಯನ್ನು ಪ್ರತಿಷ್ಠಾಪಿಸಿರುವುದು.
Published on

ಮಾನ್ವಿ: ತಾಲೂಕಿನ ಉಮಳಿಹೊಸೂರು ಗ್ರಾಮದಲ್ಲಿ ಅಂಬಾದೇವಿ ಸೇವಾ ಟ್ರಸ್ಟ್ ಹಾಗೂ ಗ್ರಾಮದ ಭಕ್ತರಿಂದ ನೂತನ ಅಂಬಾದೇವಿ ಮೂರ್ತಿಯನ್ನು ದೇವಸ್ಥಾನದಲ್ಲಿ ಮಂಗಳವಾರ ಪ್ರತಿಷ್ಠಾಪಿಸಲಾಯಿತು.

ಮೂರ್ತಿಯನ್ನು ಮಹಿಳೆಯರು ಕಳಸ, ಕುಂಭದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿ, ದೇವಸ್ಥಾನಕ್ಕೆ ಬರಮಾಡಿಕೊಳ್ಳಲಾಯಿತು. ಮೂರ್ತಿಗೆ ಧಾನ್ಯದಿವಾಸ, ಜಲಾದಿವಾಸ, ಪಂಚಾಮೃತದಿವಾಸ, ಪತ್ರಿಪುಷ್ಪ ದಿವಾಸ, ವಸ್ತ್ರದಿವಾಸ ಮಾಡಲಾಯಿತು. ನೂತನ ಅಂಬಾದೇವಿ ಮೂರ್ತಿಗೆ ಕರೆಗುಡ್ಡದ ಮಹಾಂತೇಶ್ವರ ಮಠದ ಮಹಾಂತಲಿಂಗ ಸ್ವಾಮಿಗಳು ಪ್ರಾಣ ಪ್ರತಿಷ್ಠಾಪನೆ ನೆರವೇರಿಸಿದರು.

ಒಳಬಳ್ಳಾರಿ ಸುವರ್ಣಗಿರಿ ಮಠದ ಸಿದ್ಧಲಿಂಗ ಸ್ವಾಮಿ, ಅಡವಿ ಅಮರೇಶ್ವರ ಶ್ರೀಮಠದ ಶಾಂತಮಲ್ಲ ಸ್ವಾಮಿ, ಯದಲದೊಡ್ಡಿ ಮಠದ ಮಹಾಂತಲಿಂಗ ಸ್ವಾಮಿ, ಕಲ್ಮಠದ ವಿರೂಪಾಕ್ಷ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿ, ಉಟಕನೂರು ಮರಿಬಸವರಾಜ ಶಿವಾಚಾರ್ಯ ಸ್ವಾಮಿ, ಚಿತ್ರಾಲಿ ಶಕ್ತಿ ಪೀಠದ ವಿನಾಯಕ ಸ್ವಾಮಿ, ಗೋನಾವರ ಮಲ್ಲಯ್ಯತಾತ, ಕಿಡಿಗಣಯ್ಯ ಸ್ವಾಮಿ, ವಿದ್ಯಾಧರ ಶಾಸ್ತ್ರಿ ಹಿರೇಮಠ, ಪ್ರಭುಶಾಸ್ತ್ರಿ, ಟಿಎಪಿಸಿಎಂಸಿ ಅಧ್ಯಕ್ಷ ತಿಮ್ಮರೆಡ್ಡಿ ಭೋಗವತಿ, ಪ್ರಮುಖರಾದ ಶಿವರಾಜನಾಯಕ ವಕೀಲ, ರಾಜಾ ರಾಮಚಂದ್ರನಾಯಕ, ಎಂ.ಈರಣ್ಣ, ವೀರಭದ್ರಗೌಡ ಭೋಗವತಿ, ಸಿದ್ದಲಿಂಗಪ್ಪ ವಕೀಲ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net