ಅಂಬಳೆ ಗ್ರಾಮದಲ್ಲಿ ಬೀದಿ ನಾಯಿಗಳ ದಾಳಿಗೆ ಮೇಕೆ ಸಾವು

Published on

ಯಳಂದೂರು : ತಾಲೂಕಿನ ಅಂಬಳೆ ಗ್ರಾಮದ ರವಿ ಅವರ ಮೇಕೆಯನ್ನು ಶನಿವಾರ ರಾತ್ರಿ ಬೀದಿ ನಾಯಿಗಳ ಗುಂಪು ದಾಳಿ ಮಾಡಿ ತಿಂದು ಹಾಕಿವೆ.

ಗ್ರಾಮದ ನಾಯಕ ಬಡಾವಣೆಯ ರವಿ ಅವರ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ ಮೇಕೆಯನ್ನು ಬೀದಿ ನಾಯಿಗಳ ಗುಂಪು ದಾಳಿ ಮಾಡಿ ಅರ್ಧಂಬರ್ಧವಾಗಿ ತಿಂದು ಹೋಗಿದೆ, ಜತೆಗೆ ಮತ್ತೊಂದು ಮೇಕೆಯ ಕಾಲನ್ನು ಸಹ ಕಚ್ಚಿ ಗಾಯಗೊಳಿಸಿದೆ. ನಂತರ ಅಕ್ಕಪಕ್ಕದ ನಿವಾಸಿಗಳು ನೋಡಿ ಓಡಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಗ್ರಾಮದಲ್ಲಿ ಬೀದಿ ನಾಯಿಗಳು ಹೆಚ್ಚಾಗಿದ್ದು, ಸಣ್ಣಮಕ್ಕಳು, ಹಿರಿಯ ನಾಗರಿಕರು ಸಂಚರಿಸಬೇಕಾದರೆ ಬಹಳಷ್ಟು ಕಷ್ಟಕರವಾದ ಪರಿಸ್ಥಿತಿ ಇದೆ. ಆದ್ದರಿಂದ ಸಂಬಂಧಪಟ್ಟ ಪಶು ಇಲಾಖೆ ಹಾಗೂ ಗ್ರಾಮ ಪಂಚಾಯಿತಿಯವರು ಕೂಡಲೇ ನಾಯಿಗಳನ್ನು ಹಿಡಿಸುವ ಕಾರ್ಯವನ್ನು ಮಾಡಬೇಕು. ಜತೆಗೆ ಮೇಕೆಗೆ ಸೂಕ್ತವಾದ ಪರಿಹಾರವನ್ನು ನೀಡುವ ನಿಟ್ಟಿನಲ್ಲಿ ಸಂಬಂಧಪಟ್ಟ ಇಲಾಖೆಯು ಗಮನಹರಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net