ಅಂಬಳೆ ಗ್ರಾಪಂ ಸದಸ್ಯರಾಗಿ ಎಂ.ಸ್ವಾಮಿ ಆಯ್ಕೆ

31 yelandur 02
Published on

ಯಳಂದೂರು: ತಾಲೂಕಿನ ಅಂಬಳೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವೈ.ಕೆ.ಮೋಳೆ-2ರ ಗ್ರಾಪಂ ಸದಸ್ಯ ಸ್ಥಾನಕ್ಕೆ ನಡೆದ ಉಪಚುನಾವಣೆಯಲ್ಲಿ ಎಂ.ಸ್ವಾಮಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಈ ಹಿಂದೆ ಸದಸ್ಯರಾಗಿದ್ದ ಎಚ್. ಶಿವರಾಮು ಅವರ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಎಂ.ಸ್ವಾಮಿ ಅವಿರೋಧವಾಗಿ ಆಯ್ಕೆಯಾಗಿದ್ದು, ತಹಸೀಲ್ದಾರ್ ಆನಂದಪ್ಪ ನಾಯಕ್ ಪ್ರಮಾಣ ಪತ್ರ ನೀಡಿದರು.

ತಾಪಂ ಮಾಜಿ ಸದಸ್ಯ ವೈ.ಕೆ. ಮೋಳೆ ನಾಗರಾಜು, ಪುಟ್ಟ, ಸೋಮಣ್ಣ, ವೆಂಕಟೇಶ್, ಶಿವಣ್ಣ, ಶಿವನಂಜಶೆಟ್ಟಿ, ರಾಜಣ್ಣ, ವೆಂಕಟಶೆಟ್ಟಿ, ವಿ. ನಾಗರಾಜು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net