ಅಂಬಲಿ ವಿತರಿಸಿ ರಾಜ್ ಹುಟ್ಟುಹಬ್ಬ

24blrp3
ಡಾ.ರಾಜಕುಮಾರ್ ಅವರ ಜನ್ಮದಿನದ ಅಂಗವಾಗಿ ಪಟ್ಟಣದ ಬಸವೇಶ್ವರ ವೃತ್ತದಲ್ಲಿರುವ ದ್ವಜಸ್ಥಂಬದ ಆವರಣ ಅಭಿಮಾನಿಗಳಿಗೆ ರಾಗಿ ಅಂಬಲಿ ವಿತರಿಸುತ್ತಿರುವ ಪದಾಧಿಕಾರಿಗಳು.
Published on

ಬೇಲೂರು: ಪಟ್ಟಣದ ಬಸವೇಶ್ವರ ವೃತ್ತದ ಸಮೀಪವಿರುವ ಡಾ.ರಾಜ್ ಕುಮಾರ್ ಧ್ವಜಸ್ತಂಭದ ಆವರಣದಲ್ಲಿ ಅಭಿಮಾನಿಗಳ ಸಂಘದ ಪದಾಧಿಕಾರಿಗಳು ರಾಜ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ರಾಗಿ ಅಂಬಲಿ ವಿತರಿಸಿಸುವ ಮೂಲಕ ಡಾ.ರಾಜ್‌ಕುಮಾರ್ ಹುಟ್ಟುಹಬ್ಬ ಆಚರಿಸಲಾಯಿತು.

ಡಾ.ರಾಜಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ತೀರ್ಥಂಕರ್ ಮಾತನಾಡಿ, ಡಾ.ರಾಜಕುಮಾರ್ ಅವರು ಕನ್ನಡಿಗರ ಶಕ್ತಿಯಾಗಿದ್ದಾರೆ. 200ಕ್ಕೂ ಅಧಿಕ ಚಲನಚಿತ್ರಗಳನ್ನು ನಾಡಿಗೆ ನೀಡುವ ಮೂಲಕ ಕನ್ನಡ ಭಾಷೆಗೆ ಕಾಣಿಕೆ ನೀಡಿದ್ದಾರೆ. ಅವರು ಕೇವಲ ಚಿತ್ರ ನಟರಾಗಿ ಉಳಿಯದೆ ನಾಡು, ನುಡಿ, ಜಲಕ್ಕೆ ಅನ್ಯಾಯವಾದ ಸಂದರ್ಭ ಕನ್ನಡಕ್ಕಾಗಿ ನಡೆಸಿದ ಹೋರಾಟ ಇಂದಿಗೂ ಅವಿಸ್ಮರಣೀಯ. ಕನ್ನಡಾಭಿಮಾನಿಗಳಿಗೆ ಸದಭಿರುಚಿಯ ಚಿತ್ರಗಳ ಮೂಲಕ ನಾಡಿನ ಮನೆ ಮನದಲ್ಲಿ ಮೆಚ್ಚುಗೆ ಗಳಿಸಿ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದಾರೆ. ರಾಜಕುಮಾರ್ ನಡೆ-ನುಡಿಯಲ್ಲಿ ಒಂದಾಗಿ ಇಂದಿನ ಯುವ ಜನತೆಗೆ ಮಾದರಿಯಾಗಿದ್ದಾರೆ ಎಂದು ಸ್ಮರಿಸಿದರು.

ಅಭಿಮಾನಿ ಸಂಘದ ಕಾರ್ಯದರ್ಶಿ ಫಣೀಂದ್ರ, ಮುಖಂಡರಾದ ಬಿ.ಎಸ್. ಮಂಜುನಾಥ, ಶ್ಯಾಮಣ್ಣ, ರಂಗನಾಥ, ಆಪರೇಟರ್ ಮಂಜುನಾಥ, ಯೋಗೀಶ್, ತಮ್ಮಯ್ಯ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net