

ಚಿತ್ರದುರ್ಗ: ಮರಣದ ನಂತರವೂ ತಮ್ಮ ಕಣ್ಣುಗಳು ಜೀವಂತವಾಗಿರಬೇಕು ಎನ್ನುವುದಾದರೆ ಅವುಗಳನ್ನು ದಾನ ಮಾಡಿ,ಆ ಮೂಲಕ ಅಂಧರ ಬಾಳಿಗೆ ಬೆಳಕಾಗುವಂತೆ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಕೃಷ್ಣನಾಯ್ಕ ನಾಗರಿಕರಿಗೆ ಮನವಿ ಮಾಡಿದರು. ನಗರ ಪದ್ಮಾವತಿ ಕಾಲೇಜ್ ಆ ಫ್ ನರ್ಸಿಂಗ್ ಸೈನ್ಸ್‌ನಲ್ಲಿ ಈಚೆಗೆ ಆರೋಗ್ಯಇಲಾಖೆಯಿಂದ ಏರ್ಪಡಿಸಿದ್ದ 39ನೇ ನೇತ್ರದಾನ ಪಾಕ್ಷಿಕ ಮಾಹಿತಿ ಶಿಕ್ಷಣ ಕಾರ‌್ಯಕ್ರಮದಲ್ಲಿ ಮಾತನಾಡಿದ ಅವರು,ಆಗಸ್ಟ್ 25ರಿಂದ ಆರಂಭವಾಗಿರುವ ಈ ಪಾಕ್ಷಿಕ ಸೆ.10ರ ತನಕ ನಡೆಯಲಿದೆ. ನೇತ್ರದಾನದ ಮಹತ್ವದ ಕುರಿತು ಇಲಾಖೆಯಿಂದ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ ಅವರು ಮಾತನಾಡಿ,ಒಬ್ಬ ವ್ಯಕ್ತಿ ದಾನ ಮಾಡಿದ ನೇತ್ರಗಳು ಇಬ್ಬರು ಕಾರ್ನಿಯಾ ಅಂಧರಿಗೆ ದೃಷ್ಟಿ ನೀಡುತ್ತವೆ. ಪ್ರತಿ ವರ್ಷ ಸರಾಸರಿ 5600 ನೇತ್ರದಾನಗಳಾಗುತ್ತಿವೆ. ಅಂದಾಜು 1.25 ಲಕ್ಷ ಜನರು ಕಾರ್ನಿ ಯಾ ಸಂಬಂಧಿಸಿದ ಅಂಧತ್ವದಿಂದ ಬಳಲುತ್ತಿದ್ದು,ನೇತ್ರ ದಾನಕ್ಕಾಗಿ ಕಾಯುತ್ತಿರುತ್ತಾರೆ.ರಾಜ್ಯದಲ್ಲಿ 32 ನೇತ್ರ ಬ್ಯಾಂಕ್‌ಗಳಿವೆ. ನಗರದಲ್ಲಿ ಬಸವೇಶ್ವರ ಪೂರ್ಣ ಜ್ಯೋತಿ ನೇತ್ರ ಬ್ಯಾಂಕ್ ಬಸವೇಶ್ವರ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿದೆ ಎಂದರು. ಆರೋಗ್ಯ ನಿರೀಕ್ಷಣಾಧಿಕಾರಿ ಶ್ರೀನಿವಾಸ,ಪ್ರಾಂಶುಪಾಲ ವೆಂಕಟೇಶ ರೆಡ್ಡಿ,ಉಪನ್ಯಾಸಕರಾದ ಗಂಗಾ,ತೇಜಸ್ವಿನಿ, ಜಬ್ಬಾರ್ ಇತರರು ಇದ್ದರು.