ಮೈಸೂರು: ಲೂಯಿ ಬ್ರೈಲ್ ದಿನಾಚರಣೆ ಅಂಗವಾಗಿ ನಂಜುಮಳಿಗೆಯಲ್ಲಿರುವ ಗೋಪಾಲಸ್ವಾಮಿ ಪಿಯು ಕಾಲೇಜಿನಲ್ಲಿ ಜ.18ರಂದು ಪ್ರೌಢ ಹಾಗೂ ಪದವಿ ಕಾಲೇಜುಗಳ ಅಂಧ ವಿದ್ಯಾರ್ಥಿಗಳಿಗೆ ಬ್ರೈಲ್‌ಲಿಪಿ ಓದುವ ಹಾಗೂ ಗೀತಗಾಯನ ಸ್ಪರ್ಧೆ ಆಯೋಜಿಸಲಾಗಿದೆ. ಸಕ್ಷಮ ಕರ್ನಾಟಕದಿಂದ ಕಾಲೇಜಿನ ಆವರಣದಲ್ಲಿ ಅಂದು ಮಧ್ಯಾಹ್ನ 3ಕ್ಕೆ ಸ್ಪರ್ಧೆ ನಡೆಯಲಿದ್ದು, ಅಂದೇ ಬಹುಮಾನ ವಿತರಿಸಲಾಗುವುದು. ಆಸಕ್ತರು ಮೊಬೈಲ್: 90081 04233 ಅನ್ನು ಸಂಪರ್ಕಿಸುವಂತೆ ಪ್ರಕರಣೆಯಲ್ಲಿ ತಿಳಿಸಲಾಗಿದೆ.