

ಬಾಗಲಕೋಟೆ: ಮರೋಳ ಹನಿ ನೀರಾವರಿ ಯೋಜನೆ ಕಳಪೆ ಆರೋಪ ಹಿನ್ನಲೆ ಯೋಜನೆ ವೀಕ್ಷಣೆಗೆ ವಿಧಾನಸಭೆ ಅಂದಾಜು ಸಮಿತಿ ಹುನಗುಂದ ತಾಲೂಕಿನ ವಿವಿಧೆಡೆ ಗುರುವಾರ ಭೇಟಿ ನೀಡಿತು, ಈ ಸಂದರ್ಭದಲ್ಲಿ ಅಂದಾಜು ಸಮಿತಿ ಎದುರು ಹೈಡ್ರಾಮಾವೇ ನಡೆದು ಹೋಯಿತು.
ಶಾಸಕ ಅಭಯ ಪಾಟೀಲ ಅಧ್ಯಕ್ಷತೆಯ ಅಂದಾಜು ಸಮಿತಿ ಭೇಟಿ ನೀಡಿದ ವೇಳೆ, ಬಿಜೆಪಿ, ಕಾಂಗ್ರೆಸ್ ಬೆಂಬಲಿತರಿಂದ ಪರ-ವಿರೋಧ ವ್ಯಕ್ತಪಡಿಸಿದರು. ಆರೋಪ-ಪ್ರತ್ಯಾರೋಪಕ್ಕೆ ವೇದಿಕೆಯಾಗಿತ್ತು. ಯಾವುದು ತಾರ್ಕಿಕ್ ಅಂತ್ಯ ಕಾಣಲಿಲ್ಲ.
ಹುನಗುಂದ ಶಾಸಕ ದೊಡ್ಡನಗೌಡ ಪಾಟೀಲ ಜೊತೆ ಒಂದು ಗುಂಪು ವಾಗ್ವಾದ ಮಾಡಿತು. ವಾಗ್ವಾದ ತೀವ್ರಗೊಂಡ ಹಿನ್ನಲೆ ಹೇ ಅವನ್ ಚಂಡು ಹಿಡಿದು ಕಳಿಸಿ ಎಂದು ಶಾಸಕ ಪಾಟೀಲ ರೇಗಾಡಿದರು. ಯೋಜನೆ ಕಳಪೆ ಆಗಿದೆ ನೀರು ಬರ್ತಿಲ್ಲ ಎಂದು ಒಂದು ಗುಂಪಿನ ವಾದ ಮಂಡಿಸಿತು. ತಮಗೆ ನೀರು ಬರ್ತೀದೆ, ಸುಮ್ಮನೆ ಆರೋಪ ಸರಿಯಲ್ಲ ಅಂತ ಇನ್ನೊಂದು ಗುಂಪು ವಾದ ಮಂಡಿಸಿತು.
ನಾಲ್ಕು ವರ್ಷ ಬಿಟ್ಟು ಈಗ ಏಕೆ ಇದೆಲ್ಲ? ಇದೆಲ್ಲ ಚುನಾವಣೆ ಗಿಮಿಕ್? ಕಾಮಗಾರಿ ಕಳಪೆ ಆಗಿದ್ರೆ ನಾಲ್ಕು ವರ್ಷ ಸುಮ್ಮನಿದ್ದಿದ್ದು ಏಕೆ? ಇದಕ್ಕೆ ವಿರುದ್ಧವಾಗಿ ಮತ್ತೊಂದು ಬಣದ ರೈತರ ಆರೋಪ, ನೀರು ಬರ್ತಿಲ್ಲ, ಯೋಜನೆ ಹಾಳಾಗಿದೆ ಎನ್ನುವ ತಕರಾರು ತೆಗೆದು ಸಮಿತಿ ಎದುರು ದೊಡ್ಡ ಹೈಡ್ರಾಮವೇ ನಡೆದು ಹೋಯಿತು.
ಇನ್ನು ಹುನಗುಂದ ತಾಲೂಕಿನಲ್ಲಿ ಅನುಷ್ಠಾನ ಮಾಡಿರುವ ಏಷ್ಯಾ ಖಂಡದ ಬೃಹತ್ ಹನಿ ನೀರಾವರಿ ಯೋಜನೆ ಇದಾಗಿದ್ದು, ಕಳಪೆ ಕಾಮಗಾರಿಯಾಗಿದ್ದು, ನೂರಾರು ಕೋಟಿ ಅನುದಾನ ದುರುಪಯೋಗ ಆಗಿದೆ ಎನ್ನುವ ಆರೋಪಗಳು ಕೇಳಿ ಬರುತ್ತೀವೆ. 60 ಸಾವಿರ ಎಕರೆಗೆ ನೀರಾವರಿ ಒದಗಿಸುವ ಯೋಜನೆ ಇದಾಗಿದೆ. ಶಾಸಕ ಅಭಯ ಪಾಟೀಲ ಅಧ್ಯಕ್ಷತೆಯಲ್ಲಿ ಸದಸ್ಯರಾಗಿರುವ ಶಾಸಕರಾದ ಕೆ.ಎಂ.ಶಿವಲಿಂಗೇಗೌಡ, ಅಮರೆಗೌಡ ಭಯ್ಯಾಪುರ, ದೊಡ್ಡನಗೌಡ ಪಾಟೀಲ ನೇತೃತ್ವದಲ್ಲಿ ಅಂದಾಜು ಸಮಿತಿ ಭೇಟಿ ನೀಡಿತು.