

ಮೈಸೂರು: ಆಕಾಶ್ ಎಜುಕೇಷನಲ್ ಸರ್ವೀಸಸ್ ಲಿಮಿಟೆಡ್(ಎಇಎಸ್‌ಎಲ್) ವತಿಯಿಂದ ‘ಅಂಥೆ-2025’ (ಆಕಾಶ್ ರಾಷ್ಟ್ರೀಯ ಪ್ರತಿಭಾನ್ವೇಷಣೆ ಪರೀಕ್ಷೆ) ಮೈಸೂರು ಸೇರಿದಂತೆ ದೇಶಾದ್ಯಂತ ಹಮ್ಮಿಕೊಂಡಿದೆ. ಈ ಪರೀಕ್ಷೆಯಲ್ಲಿ ಅರ್ಹತೆ ಪಡೆದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, ನಗದು ಪ್ರಶಸ್ತಿ ನೀಡಲಾಗುತ್ತದೆ.
5ರಿಂದ 12ನೇ ತರಗತಿಯ ವಿದ್ಯಾರ್ಥಿಗಳು ಇದರಲ್ಲಿ ಪಾಲ್ಗೊಳ್ಳಬಹುದು. ಇದಕ್ಕಾಗಿ 250 ಕೋಟಿ ರೂ. ಮೌಲ್ಯದ ಶೇ.100 ವಿದ್ಯಾರ್ಥಿವೇತನ ಮತ್ತು 2.5 ಕೋಟಿ ರೂ. ಮೌಲ್ಯದ ನಗದು ಪ್ರಶಸ್ತಿ ನೀಡಲಾಗುತ್ತದೆ ಎಂದು ಸಂಸ್ಥೆಯ ಕರ್ನಾಟಕ ವಿಭಾಗದ ಸಹಾಯಕ ನಿರ್ದೇಶಕ ಡಾ.ಡಿ.ವಿಕ್ರಮ್ ಚಕ್ರವರ್ತಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಇದು ವಿದ್ಯಾರ್ಥಿಗಳು ವೈದ್ಯಕೀಯ ಅಥವಾ ಇಂಜಿನಿಯರಿಂಗ್‌ನಲ್ಲಿ ಯಶಸ್ವಿ ವೃತ್ತಿಜೀವನದ ಕನಸುಗಳನ್ನು ಸಾಧಿಸಲು ಸಹಾಯ ಮಾಡುತ್ತದೆ. ಪರೀಕ್ಷೆಯು ವಿದ್ಯಾರ್ಥಿಗಳಿಗೆ ಆಕಾಶ್‌ನ ತಜ್ಞ ಅಧ್ಯಾಪಕರು ನೀಡುವ ನೀಟ್, ಜೆಇಇ, ಕೆ-ಸಿಇಟಿ, ಎನ್‌ಟಿಎಸ್‌ಇ ಮತ್ತು ಒಲಿಂಪಿಯಾಡ್‌ಗಳಂತಹ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಪಡೆಯಲು ವೇದಿಕೆ ಕಲ್ಪಿಸಿಕೊಡಲಾಗುತ್ತದೆ ಎಂದು ಹೇಳಿದರು.
ದೇಶಾದ್ಯಂತ ಆನ್‌ಲೈನ್ ಮತ್ತು ಆಫ್‌ಲೈನ್ ಎರಡರಲ್ಲೂ ಪರೀಕ್ಷೆಯನ್ನು ನಡೆಸಲಾಗುವುದು. ಆನ್‌ಲೈನ್ ಮೋಡ್‌ನಲ್ಲಿ ಅಕ್ಟೋಬರ್ 4ರಿಂದ 12ರ ರವರೆಗೆ ನಡೆಯಲಿದೆ. ಈ ಸಮಯದಲ್ಲಿ ವಿದ್ಯಾರ್ಥಿಗಳು ಒಂದು ಗಂಟೆಯ ಸ್ಲಾಟ್ ಅನ್ನು ಆಯ್ಕೆ ಮಾಡುವ ಮೂಲಕ ತಮ್ಮ ಅನುಕೂಲಕ್ಕೆ ತಕ್ಕಂತೆ ಪರೀಕ್ಷೆ ತೆಗೆದುಕೊಳ್ಳಬಹುದು.
ಆಫ್‌ಲೈನ್ ಪರೀಕ್ಷೆಯನ್ನು ಅಕ್ಟೋಬರ್ 5 ಮತ್ತು 12ರಂದು ಮೈಸೂರು ಸೇರಿದಂತೆ 26 ರಾಜ್ಯಗಳು ಸೇರಿದಂತೆ ದೇಶದ 415 ಆಕಾಶ್ ಕೇಂದ್ರಗಳಲ್ಲಿ ಏರ್ಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.
ಅಂಥೆ-2025 ನೋಂದಣಿಗಾಗಿ https://anthe.aakash.ac.in/home ವೆಬ್‌ಸೈಟ್‌ಗೆ ಭೇಟಿ ನೀಡಬಹುದು ಅಥವಾ ಅವರ ಹತ್ತಿರದ ಆಕಾಶ್ ಕೇಂದ್ರಕ್ಕೆ ಭೇಟಿ ನೀಡಬಹುದು. ಆನ್‌ಲೈನ್ ಮತ್ತು ಆಫ್‌ಲೈನ್ ವಿಧಾನಗಳೆರಡಕ್ಕೂ ಪರೀಕ್ಷಾ ಶುಲ್ಕ 300 ರೂ. ಆಗಿದೆ.
ಮೊದಲೇ ಅರ್ಜಿ ಸಲ್ಲಿಸುವವರಿಗೆ ಶೇ.50 ರಿಯಾಯಿತಿ ಲಭ್ಯವಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವು ಆಯ್ಕೆ ಮಾಡಿದ ಆನ್‌ಲೈನ್ ಪರೀಕ್ಷಾ ದಿನಾಂಕಕ್ಕೆ ಮೂರು ದಿನಗಳ ಮೊದಲು ಮತ್ತು ಆಯ್ಕೆ ಮಾಡಿದ ಆಫ್‌ಲೈನ್ ಪರೀಕ್ಷಾ ದಿನಾಂಕಕ್ಕೆ ಏಳು ದಿನಗಳ ಮೊದಲು ಇರಲಿದೆ. ಪ್ರವೇಶ ಪತ್ರವನ್ನು ಆಯಾ ಪರೀಕ್ಷಾ ದಿನಾಂಕಗಳಿಗೆ 5 ದಿನಗಳ ಮೊದಲು ನೀಡಲಾಗುತ್ತದೆ ಎಂದು ತಿಳಿಸಿದರು.
‘ಗಣಿತ ಅಂಥೆ’ ಒಂದು ಗಂಟೆಯ ಪರೀಕ್ಷೆಯಾಗಿದೆ. ವಿದ್ಯಾರ್ಥಿಗಳ ಗ್ರೇಡ್ ಮತ್ತು ಸ್ಟ್ರೀಮ್ ಆಕಾಂಕ್ಷೆ ಆಧರಿಸಿ 40 ಬಹುಆಯ್ಕೆ ಪ್ರಶ್ನೆಗಳನ್ನು ಒಳಗೊಂಡಿದೆ. ಇದರ ಫಲಿತಾಂಶಗಳನ್ನು ಹಂತ ಹಂತವಾಗಿ ಪ್ರಕಟಿಸಲಾಗುವುದು.
10ನೇ ತರಗತಿ ವಿದ್ಯಾರ್ಥಿಗಳ ಫಲಿತಾಂಶವನ್ನು ಅ. 24ರಂದು, 7ರಿಂದ 9 ತರಗತಿಗಳ ಫಲಿತಾಂಶವನ್ನು ಅ. 2ರಂದು, 5 ಮತ್ತು 6 ನೇ ತರಗತಿಗಳ ಫಲಿತಾಂಶವನ್ನು ನವೆಂಬರ್ 1ರಂದು ಮತ್ತು 11, 12ನೇ ತರಗತಿಗಳ ಫಲಿತಾಂಶಗಳನ್ನು ನ. 4ರಂದು ಪ್ರಕಟಿಸಲಾಗುವುದು. ಎಲ್ಲ್ಲ ಫಲಿತಾಂಶಗಳು ‘ಅಂಥೆ’ ವೆಬ್‌ಸೈಟ್‌ನಲ್ಲಿ ಲಭ್ಯ ಇರಲಿದೆ ಎಂದು ಡಾ.ಡಿ.ವಿಕ್ರಮ್ ಚಕ್ರವರ್ತಿ ಮಾಹಿತಿ ನೀಡಿದರು.
8ರಿಂದ 12 ನೇ ತರಗತಿಯ ವಿದ್ಯಾರ್ಥಿಗಳಿಗೆ ಆಕಾಶ್ ಇನ್ವಿಕ್ಟಸ್ ಜೆಇಇ ಅಡ್ವಾನ್ಸ್ ತಯಾರಿ ಕಾರ್ಯಕ್ರಮದ ಪ್ರವೇಶಕ್ಕಾಗಿ ವಿದ್ಯಾರ್ಥಿವೇತನ ಪರೀಕ್ಷೆಯಾದ ಇನ್ವೆಕ್ಟಸ್ ಏಸ್ ಪರೀಕ್ಷೆಯನ್ನೂ ಪ್ರಾರಂಭಿಸುತ್ತಿದೆ.
ರಾಷ್ಟ್ರೀಯ ಮಟ್ಟದ ಅರ್ಹತಾ-ಕಮ್- ವಿದ್ಯಾರ್ಥಿವೇತನ ಪರೀಕ್ಷೆಯನ್ನು ಆ.24, ಆ.31 ಮತ್ತು ಸೆಪ್ಟೆಂಬರ್ 7ರಂದು ರಂದು ಏರ್ಪಡಿಸಲಾಗಿದೆ. ಆನ್‌ಲೈನ್ ಮತ್ತು ಆಫ್‌ಲೈನ್ ವಿಧಾನಗಳಲ್ಲಿ ಮೂರು ಗಂಟೆಗಳ ಪರೀಕ್ಷೆಯು (ಬೆಳಗ್ಗೆ 10ರಿಂದ ಮಧ್ಯಾಹ್ನ 1ರವರೆಗೆ) ನಡೆಯಲಿದೆ. 300 ರೂ. ಶುಲ್ಕ ನಿಗದಿಪಡಿಸಲಾಗಿದೆ ಎಂದು ತಿಳಿಸಿದರು.
ಸಂಸ್ಥೆಯ ದಕ್ಷಿಣ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ದೀಪಕ್, ಕುವೆಂಪುನಗರ ಶಾಖೆಯ ಮುಖ್ಯಸ್ಥ ಡಿ.ಸೂರಜ್, ವೈದ್ಯಕೀಯ ವಿಭಾಗದ ಸಂಜೀವಕುಮಾರ್, ಕಿಶೋರ್‌ಬಾಬು ಇದ್ದರು.