ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡ ಮಂಗ!

0102
Published on

ಬೆಳಗಾವಿ: ವ್ಯಕ್ತಿಯ ಅಂತ್ಯಕ್ರಿಯೆಯಲ್ಲಿ ಮಂಗವೊಂದು ಭಾಗಿಯಾದ ಅಪರೂಪದ ಟನೆ ಶನಿವಾರ ಶಹಾಪುರದಲ್ಲಿ ನಡೆದಿದೆ. ಶಹಾಪುರ ಜೋಶಿ ಗಲ್ಲಿಯ ನಿವಾಸಿ ಮಾರುತಿ ಕಡಗಾಂವಕರ (65) ಎಂಬುವರ ಅಂತ್ಯಕ್ರಿಯೆ ವೇಳೆ ಚಿತಾಗಾರದ ಬಲಭಾಗದಲ್ಲಿ ಮಂಗ ಕುಳಿತು, ಅಂತ್ಯಕ್ರಿಯೆ ವಿಧಿ&ವಿಧಾನ ನೋಡಿತು. ಪಾರ್ಥಿವ ಶರೀರವನ್ನು ಚಿತಾಗಾರಕ್ಕೆ ತಂದ ಕೂಡಲೇ ಮಂಗವು ಏಕಾಏಕಿ ಮರದಿಂದ ಕೆಳಗೆ ಇಳಿಯಿತು.

ಅಂತ್ಯಕ್ರಿಯೆಗೆ ಬಂದಿದ್ದ ಜನರು ಆರಂಭದಲ್ಲಿ ಮಂಗವನ್ನು ರ್ನಿಲಕ್ಷಿಸಿದರು. ಆದರೆ, ಸ್ಮಶಾನ ಪ್ರವೇಶಿಸಿದ ಮಂಗ ಚಿತೆಗೆ ತಂದಿದ್ದ ಮರದ ದಿಮ್ಮಿಗಳ ಮೇಲೆ ಕುಳಿತಿತು. ಅಷ್ಟೇ ಅಲ್ಲ ಮಾರುತಿ ಅವರ ಮೃತದೇಹವನ್ನು ಮುಟ್ಟುವುದಕ್ಕೂ ಮುಂದಾಗಿತ್ತು. ಮೃತ ಮಾರುತಿಗೆ ನೀರು ಕೊಡಲು ಕೋತಿಯು ಬಯಸಿತ್ತು.

ಸ್ಮಶಾನದಲ್ಲಿ ಗಲಾಟೆಯಿಂದಾಗಿ ಸಾಧ್ಯವಾಗಲಿಲ್ಲ ಎಂದು ಪ್ರತ್ಯದರ್ಶಿಗಳು ಹೇಳಿದರು. ಚಿತೆಯನ್ನು ಸಿದ್ಧಪಡಿಸಿ ಅದರ ಮೇಲೆ ಮೃತದೇಹ ಇಡುವ ಪ್ರಕ್ರಿಯೆಯತ್ತ ಮಂಗ ಗಮನ ಹರಿಸುತ್ತಿರುವುದನ್ನು ಕಂಡು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದ ಜನ ಅಚ್ಚರಿ ಪಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net