ಅಂತಿಮ ಕ್ಷಣದವರೆಗೂ ಮತಯಾಚನೆ

IMG_20230510_112435
Published on

ಸುಂಟಿಕೊಪ್ಪ: ಸುಂಟಿಕೊಪ್ಪದ ಕನ್ನಡ ವೃತ್ತದ ಬಳಿ ಬಿಜೆಪಿ, ಕಾಂಗ್ರೆಸ್ ಹಾಗೂ ಎಸ್‌ಡಿಪಿಐ ಕಾರ್ಯಕರ್ತರು ಅಂತಿಮ ಕ್ಷಣದವರೆಗೂ ಮತದಾರರಲ್ಲಿ ಮತಯಾಚಿಸುತ್ತಿದ್ದರು.

ತಮ್ಮ ಪಕ್ಷದ ಟೋಪಿ, ಶಲ್ಯ ಧರಿಸಿದ್ದ ಕಾರ್ಯಕರ್ತರು ಮತದಾನದಕ್ಕೆ ತೆರಳುತ್ತಿದ್ದವರಿಗೆ ಮತ ನೀಡುವಂತೆ ಮನವಿ ಮಾಡಿದರು. ಗದ್ದೆಹಳ್ಳದಲ್ಲೂ ಬಿಜೆಪಿ, ಕಾಂಗ್ರೆಸ್ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ಮತಯಾಚಿಸಿದರು. ಮಾದಾಪುರ ರಸ್ತೆಯಲ್ಲೂ ಪನ್ಯ ತೋಟದ ಕಡೆಯಿಂದ ಬರುವ ಮತದಾರರ ಮನವೊಲಿಸಲು ಬಿಜೆಪಿ, ಕಾಂಗ್ರೆಸ್ ಕಾರ್ಯಕರ್ತರು ಮುಂದಾಗಿದ್ದರು.

ಸುಂಟಿಕೊಪ್ಪದಲ್ಲಿ ಜೆಡಿಎಸ್ ಹೆಚ್ಚಿನ ಅಭಿಮಾನಿಗಳು, ಕಾರ್ಯಕರ್ತರು ಇದ್ದರೂ ಯಾರೂ ಜೆಡಿಎಸ್‌ನ ಪರ ಮತಯಾಚಿಸಲು ಇಲ್ಲದೆ ಇರುವುದು ಅಚ್ಚರಿ ಮೂಡಿಸಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net