ಅಂತಿಮ ಕಣದಲ್ಲಿ 11 ಅಭ್ಯರ್ಥಿಗಳು

11 candidates in the final round
ದಿ. ಸಿಂದಗಿ ಪಟ್ಟಣ ಸಹಕಾರ ಬ್ಯಾಂಕ್ ಮುಖ್ಯ ಕಚೇರಿ.
Published on

ಸಿಂದಗಿ: ಪಟ್ಟಣದ ಪ್ರತಿಷ್ಠಿತ ದಿ. ಸಿಂದಗಿ ಪಟ್ಟಣ ಸಹಕಾರ ಬ್ಯಾಂಕ್ ನಿ. ಸಿಂದಗಿಯ 2023-2028ರವರೆಗಿನ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆ ಆ. 20ರಂದು ನಡೆಯಲಿದ್ದು, ಅಂತಿಮವಾಗಿ ಸಾಮಾನ್ಯ ಕ್ಷೇತ್ರದ 9 ಸ್ಥಾನಗಳಿಗೆ 11 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಒಟ್ಟು 15 ಸದಸ್ಯರ ಆಡಳಿತ ಮಂಡಳಿ ಚುನಾವಣೆಗೆ 40 ನಾಮಪತ್ರಗಳು ಸಲ್ಲಿಕೆಯಾಗಿದ್ದವು. ನಾಮಪತ್ರ ಹಿಂಪಡೆಯುವ ದಿನವಾದ ಸೋಮವಾರ 23 ಅಭ್ಯರ್ಥಿಗಳು ತಮ್ಮ ನಾಮಪತ್ರ ಹಿಂಪಡೆದಿದ್ದು, ಎರಡು ಮಹಿಳಾ ಕ್ಷೇತ್ರಗಳು ಸೇರಿದಂತೆ ಇತರ ನಾಲ್ಕು ಮೀಸಲು ಕ್ಷೇತ್ರದ ಒಟ್ಟು 6 ಸದಸ್ಯರು ಅವಿರೋಧವಾಗಿ ಆಯ್ಕೆಯಾದರು.

ಎರಡು ಮಹಿಳಾ ಮೀಸಲು ಸ್ಥಾನಕ್ಕೆ ಸ್ಪರ್ಧಿಸಿದ್ದ ಮಹಾದೇವಿ ಪಟ್ಟಣಶೆಟ್ಟಿ ಹಾಗೂ ಮಹಾದೇವಿ ಬಮ್ಮಣ್ಣಿ, ಹಿಂದುಳಿದ (ಅ) ವರ್ಗದ ಅಭ್ಯರ್ಥಿ ಸಂತೋಷ ಪೂಜಾರಿ, ಹಿಂದುಳಿದ (ಬ) ವರ್ಗದ ಅಭ್ಯರ್ಥಿ ನೀಲಕಂಠ ಗುಣಾರಿ, ಪರಿಶಿಷ್ಟ ಜಾತಿ ಕ್ಷೇತ್ರದ ಲಕ್ಷ್ಮಣ ದೊಡಮನಿ ಹಾಗೂ ಪರಿಶಿಷ್ಟ ಪಂಗಡ ಕ್ಷೇತ್ರಕ್ಕೆ ಸ್ಪರ್ಧಿಸಿದ್ದ ಮಹಾದೇವಪ್ಪ ಸಿಂದಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಉಳಿದ 9 ಸಾಮಾನ್ಯ ಮತಕ್ಷೇತ್ರದ ಅಭ್ಯರ್ಥಿಗಳಾದ ಷಣ್ಮುಖಪ್ಪ ಸಂಗಮ, ಸುರೇಶಬಾಬು ಜೋಗೂರ, ವಿಜಯಕುಮಾರ ವಾರದ, ದುಂಡಪ್ಪ ಸೊನ್ನದ, ರವಿ ನಾಗೂರ, ಸಿದ್ಲಿಂಗಪ್ಪ ವಡ್ಡೋಡಗಿ, ನಿಹಾಲಚಂದ ಪೋರವಾಲ, ಪ್ರಕಾಶ ಕೋರಿ, ಶರಣಪ್ಪ ವಾರದ, ಬಸವರಾಜ ಶಹಾಪುರ, ಬಸವರಾಜ ಕಮತಗಿ ಅಂತಿಮ ಕಣದಲ್ಲಿ ಉಳಿದಿದ್ದಾರೆ.

ಆ. 20ರಂದು ನಗರದ ಚೆನ್ನವೀರ ಸ್ವಾಮೀಜಿ ಪ್ರೌಢಶಾಲೆ ಆವರಣದಲ್ಲಿ ಬೆಳಗ್ಗೆ 9ರಿಂದ ಮಧ್ಯಾಹ್ನ 4ಗಂಟೆಯವರೆಗೆ ಮತದಾನ ನಡೆಯಲಿದೆ ಎಂದು ಚುನಾವಣಾಧಿಕಾರಿ, ಇಂಡಿ ಸಹಕಾರಿ ಸಂಘಗಳ ಸಹಾಯಕ ನಿಬಂಧಕರ ಕಚೇರಿಯ ನಿರೀಕ್ಷಕ ವಿಜಯಕುಮಾರ ನಾಯಕ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net