ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಬೆಳಗಾವಿ ವಿದ್ಯಾರ್ಥಿಗಳ ಸಾಧನೆ

BARC-Conference.jpeg
Published on


ಬೆಳಗಾವಿ: ಮುಂಬೈನ ಅನುಶಕ್ತಿನದ ಡಿಎಇ ಕನ್ವೆನ್ಷನ್ ಸೆಂಟರ್‌ನಲ್ಲಿ ಬಾಬಾ ಪರಮಾಣು ಸಂಶೋಧನೆ  ಕೇಂದ್ರ (ಬಾರ್ಕ್) ಹಾಗೂ  ಭಾರತೀಯ ಸೊಸೈಟಿ ಫಾರ್ ಎಲೆಕ್ಟ್ರೋಅನಾಲಿಟಿಕಲ್ ಕೆಮಿಸ್ಟ್ರಿ ಆಶ್ರಯದಲ್ಲಿ ಈಚೆಗೆ ಜರುಗಿದ  ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಬೆಳಗಾವಿ ಕೆಎಲ್‌ಎಸ್ ಜಿಐಟಿ ವಿದ್ಯಾರ್ಥಿಗಳು ಮಂಡಿಸಿರುವ ಸಂಶೋಧನ ಪ್ರಬಂಧಗಳು ಆಯ್ಕೆಯಾಗಿವೆ.
ನ್ಯಾನೋ-ಕ್ಲಬ್‌ನ 5 ನೇ ಸೆಮಿಸ್ಟರ್ ಎಲೆಕ್ಟ್ರಾನಿಕ್ಸ್  ಮತ್ತು ಸಂವಹನ ವಿಭಾಗದಿಂದ ಬಿಇ ವಿದ್ಯಾರ್ಥಿಗಳಾದ ಹೃಷಿಕೇಶ ಕೊಳ್ಳಿ, ಜೆ. ಮೋಹನ, ಸೌರಭ ಜೋಶಿ, ಸಂಚಿ ಭಸ್ಮೆ, ಮಧುಮಿತಾ ವಿ. ಗೌಡರ ಮತ್ತು ಮೃಣಾಲಿನಿ ಕುಲಕರ್ಣಿ , ಇವರು  ಡಾ ರವಿರಾಜ ಎಂ. ಕುಲಕರ್ಣಿ, ಮುಖ್ಯಸ್ಥರು, ರಸಾಯನಶಾಸ್ತ್ರ ವಿಭಾಗ ಮತ್ತು ನ್ಯಾನೊ-ಸೆಂಟರ್ ಸಂಯೋಜಕರು, ಇವರು ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿ ಮಾಡಿಫೈಡ ಸೆನ್ಸರ್ಸ ಫಾರ ಎಲೆಕ್ಟ್ರೋಡ್ ಅಪ್ಲೀಕಶನ್ ಕುರಿತಾಗಿ ಸಲ್ಲಿಸಿದ ಆರು ವೈಜ್ಞಾನಿಕ ಸಂಶೋಧನ ಪ್ರಬಂಧ ಗಳು ಈ ಪ್ರತಿಷ್ಠಿತ ಸಮ್ಮೇಳನದಲ್ಲಿ  ಆಯ್ಕೆಯಾದವು.
ಬಾರ್ಕ, ಐಐಟಿ , ಎನಐಟಿ , ರಾಷ್ಟೀಯ  ವಿಶ್ವವಿದ್ಯಾನಿಲಯಗಳು, ಪೋರ್ಚುಗಲ, ದಕ್ಷಿಣ ಕೊರಿಯಾ, ದಕ್ಷಿಣ ಆಫ್ರಿಕಾ ಮತ್ತು ಯುನೈಟೆಡ್ ಕಿಂಗ್‌ಡಮ್‌ನಿಂದ ಸುಮಾರು 400 ಪ್ರಭಂದಗಳನ್ನು ಪ್ರಸ್ತುತಪಡಿಸಿದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net