ಅಂತಾರಾಷ್ಟ್ರೀಯ ವಿಶೇಷ ಒಲಿಂಪಿಕ್ಸ್‌ನ ಸೈಕ್ಲಿಂಗ್ ಸ್ಪರ್ಧೆ- ದಾವಣಗೆರೆಯ ಸುಶ್ರುತ್ ಗೆ ಚಿನ್ನ

IMG-20230711-WA0029.jpg
Published on

ದಾವಣಗೆರೆ: ಇಲ್ಲಿನ ಸರಸ್ವತಿ ನಗರದ ಸಂವೇದ ವಿಶೇಷ ಶಾಲೆಯ ವಿದ್ಯಾರ್ಥಿ ಎಂ.ಎಸ್.ಸುಶ್ರುತ್, ಜರ್ಮನಿ ರಾಷ್ಟ್ರದ ಬರ್ಲಿನ್‌ನಲ್ಲಿ ಇತ್ತೀಚೆಗೆ ಆಯೋಜಿಸಿದ್ದ್ದ ಅಂತಾರಾಷ್ಟ್ರೀಯ ವಿಶೇಷ ಒಲಿಂಪಿಕ್ಸ್‌ನ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದಿದ್ದಾನೆ.

16-19 ವರ್ಷ ವಯೋಮಾನದವರ ವಿಭಾಗದ, ಟೈಂ ಟ್ರಯಲ್ ವಿಧದ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಸುಶ್ರುತ್, 7 ನಿಮಿಷ 36 ಸೆಕೆಂಡಿನಲ್ಲಿ 5 ಕಿಮೀ. ಗುರಿ ಮುಟ್ಟುವ ಮೂಲಕ ಚಿನ್ನದ ಪದಕ ಗಿಟ್ಟಿಸಿದ್ದಾನೆ. ಉಳಿದಂತೆ ಬ್ರಿಟನ್ ಬೆಳ್ಳಿ, ಅಮೆರಿಕ ಕಂಚಿನ ಪದಕ ಪಡೆದಿದೆ.

ವಿಶೇಷ ಒಲಿಂಪಿಕ್ಸ್‌ಗೆ ಆಯ್ಕೆಯಾಗಿದ್ದ ಭಾರತದ ನಾಲ್ವರು ಮಕ್ಕಳಲ್ಲಿ ಒಬ್ಬನಾಗಿದ್ದ ಸುಶ್ರುತ್, ಕರ್ನಾಟಕವನ್ನು ಪ್ರತಿನಿಧಿಸಿದ್ದ ಏಕೈಕ ಬಾಲಕನೆಂಬುದು ವಿಶೇಷ. ದೆಹಲಿಯಲ್ಲಿ ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರಿಂದ ಸನ್ಮಾನ ಪಡೆದು ತವರಿಗೆ ಮರಳಿದ್ದಾನೆ. ಈತ ಮಂಜುನಾಥ-ಮಮತಾ ದಂಪತಿಯ ಪುತ್ರನಾಗಿದ್ದು, ಶೀಘ್ರವೇ ಕರ್ನಾಟಕ ಸರ್ಕಾರ ಕೂಡ ಗೌರವಿಸಲಿದ್ದು ದಿನಾಂಕ ನಿಗದಿಯಾಗಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net