ಅಂತಾರಾಷ್ಟ್ರೀಯ ದಿಯಾನಿ ವಜ್ರಾಭರಣ ಪ್ರದರ್ಶನಕ್ಕೆ ಚಾಲನೆ

16Jaggu11
ಬೆಳಗಾವಿ ನಗರದ ಯುಕೆ-27 ಹೋಟೆಲ್‌ನಲ್ಲಿ ಭಾನುವಾರ ಅಂತಾರಾಷ್ಟ್ರೀಯ ಖ್ಯಾತಿಯ ದಿಯಾನಿ ಕಂಪನಿಯ ವಜ್ರಾಭರಣ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಆಶಾ ಕೋರೆ, ದೀಪ್ತಿ ಕೋರೆ ಇತರರಿದ್ದರು.
Published on

ಬೆಳಗಾವಿ: ನಗರದ ಜಿಲ್ಲಾಸ್ಪತ್ರೆಯ ಬಳಿ ಯುಕೆ-27 ಹೋಟೆಲ್‌ನಲ್ಲಿ ಭಾನುವಾರ ಅಂತಾರಾಷ್ಟ್ರೀಯ ಖ್ಯಾತಿಯ ದಿಯಾನಿ ಕಂಪನಿಯ ವಜ್ರಾಭರಣ ಪ್ರದರ್ಶನ ಮತ್ತು ಮಾರಾಟ ಮೇಳದಲ್ಲಿ ಆಶಾ ಕೋರೆ ಪಾಲ್ಗೊಂಡಿದ್ದರು.

ಅಂತಾರಾಷ್ಟ್ರೀಯ ಖ್ಯಾತಿಯ ವಜ್ರಾಭರಣಗಳ ವಿನ್ಯಾಸಗಾರ್ತಿಯಾದ ದೀಪ್ತಿ ಕೋರೆ ಅವರ ಒಡೆತನದ ದಿಯಾನಿ ಕಂಪನಿಯು ಸಾಂಪ್ರದಾಯಿಕ, ಅತ್ಯಾಧುನಿಕ ಶೈಲಿಯ ಹಾಗೂ ವಿವಿಧ ಮಾದರಿಗಳ ವಜ್ರಾಭರಣಗಳ ಪ್ರದರ್ಶನ ಜರುಗಲಿದೆ.

ಬೆಳಗಾವಿಯಲ್ಲಿ ಕಳೆದ 20 ವರ್ಷಗಳಿಂದ ವಜ್ರಾಭರಣ ಪ್ರದರ್ಶನ ಮತ್ತು ಮಾರಾಟ ಆಯೋಜಿಸಲಾಗುತ್ತಿದ್ದು, ಬೆಳಗಾವಿ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳ ಗ್ರಾಹಕರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ದಿಯಾನಿ ವಜ್ರಾಭರಣಗಳು ಕೇವಲ
ಬಿಳಿ ಬಣ್ಣದಲ್ಲಿ ಅಷ್ಟೇ ಅಲ್ಲದೆ, ಬೇರೆ ಬೇರೆ ಬಣ್ಣದಲ್ಲಿಯೂ ಲಭ್ಯ ಇವೆ. ಪ್ರದರ್ಶನವು ಅ.17ರ ವರೆಗೆ ಬೆಳಗ್ಗೆ 11ರಿಂದ ರಾತ್ರಿ 7 ಗಂಟೆವರೆಗೆ ಇರಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net