ಅಂತಾರಾಷ್ಟ್ರೀಯ ಕರಾಟೆ ಸಮ್ಮೇಳನದಲ್ಲಿ ಜಿಲ್ಲೆ ವಿದ್ಯಾರ್ಥಿಗಳು ಭಾಗಿ

3 gkp 01
Published on


ಮಡಿಕೇರಿ : ಆಲ್ ಇಂಡಿಯಾ ಶಿಟೊ ರಿಯೊ ಕರಾಟೆ ಡಿ ಯೂನಿಯನ್ ಹಾಗೂ ಕರ್ನಾಟಕ ಜೆನ್ ಶಿಟೊ ರಿಯೊ ಅಸೋಸಿಯೇಷನ್ ಸಹಯೋಗದಲ್ಲಿ ಬೆಂಗಳೂರು ಕೋರಮಂಗಲ ಸ್ಪೋರ್ಟ್ಸ್ ಕ್ಲಬ್ ಸ್ಟೇಡಿಯಂನಲ್ಲಿ ಶನಿವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ತಾಂತ್ರಿಕ ಸಮ್ಮೇಳನದಲ್ಲಿ ಜಿಲ್ಲೆಯ ಶಾಲೆಯ 14 ಕರಾಟೆ ಪಟುಗಳು ಭಾಗವಹಿಸಿದ್ದರು.
ಹನ್ಜಿ ಕೈಚು ಗೆನ್ಸೊ ಲ್ಟಟಾ, ರಾಮಲಿಂಗಂ, ಶಶಿಧರನ್ ತಾಂತ್ರಿಕ ಸಲಹೆ ನೀಡಿದರು. ಸುಮಾರು 400 ಕರಾಟೆ ಪಟುಗಳು ಭಾಗವಹಿಸಿದ್ದ ಸಮ್ಮೇಳನದಲ್ಲಿ ಜಿಲ್ಲೆಯ ಎಂ.ಆರ್.ಸುಮನ್, ಟಿ.ಸಿ.ಅನಿಲ್ ಕುಮಾರ್, ಕಾರ್ತಿಕ್ ದೇವಯ್ಯ, ಕೆ.ಬಿ.ತಶನ್ ನಂಜಪ್ಪ, ಕೆ.ಬಿ.ತನಿಕಾ ನೀಲಮ್ಮ, ಕೆ.ಬಿ.ತ್ರಿಷಾ ದೇಚಮ್ಮ, ಎ.ಎಂ.ಜಷ್ ಕಾವೇರಪ್ಪ, ಎ.ಎಸ್.ಪೊನ್ನಮ್ಮ, ಕೆ.ದಿಷಾ ಚೆಂಗಪ್ಪ, ಜೆ.ಜೆ.ಡೆರಿನ್ ದೇವಯ್ಯ, ಟಿ.ಪಿ.ಭವ್ಯ, ಬಿ.ಆರ್.ರಕ್ಷಿತಾ, ಇಳಾ ತಂಗಮ್ಮ, ಜಮ್ಮಡ ಜಯ ಜೋಯಪ್ಪ ಭಾಗವಹಿಸಿದ್ದರು. ಕರ್ನಾಟಕ ಜೆನ್ ಶಿಟೊರಿಯೊ ಅಸೋಸಿಯೇಷನ್ ಅಧ್ಯಕ್ಷ ಚೆಪ್ಪುಡೀರ ಅರುಣ್ ಮಾಚಯ್ಯ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net