ಅಂತಾರಾಜ್ಯ ಸಾರಿಗೆ ಸ್ಥಗಿತ ಪ್ರಯಾಣಿಕರ ಪರದಾಟ

KSRTC bus
Published on

ಆಳಂದ: ಮಹಾರಾಷ್ಟçಕ್ಕೆ ಆಳಂದ ಮಾರ್ಗವಾಗಿ ಸಂಚರಿಸುತ್ತಿದ್ದ ಕಲ್ಯಾಣ ಕರ್ನಾಟಕ ಸಾರಿಗೆ ಬಸ್‌ಗಳ ಸೇವೆ ಕೆಲ ದಿನಗಳಿಂದ ಸ್ಥಗಿತಗೊಳಿಸಿದ್ದರಿಂದ ಪ್ರಯಾಣಿಕರು ಪರದಾಡುವಂತಾಗಿದೆ.

ಗಡಿ ಭಾಗದಿಂದ ಸೊಲ್ಲಾಪುರ, ಮುಂಬೈ ಮಾರ್ಗಕ್ಕೆ ಸಮರ್ಪಕ ಬಸ್ ಸಂಚಾರ ಇಲ್ಲದ್ದರಿಂದ ಜನರು ನಿತ್ಯ ಸಂಕಷ್ಟ ಅನುಭವಿಸುತ್ತಿದ್ದಾರೆ. ಈ ಮೊದಲು ನಿತ್ಯ ಸೊಲ್ಲಾಪುರಕ್ಕೆ 11, ಪುಣೆ 5, ಮುಂಬೈ, ವಲ್ಲಭನಗರಕ್ಕೆ ತೆರಳುವ ಸ್ಲೀಪರ್ ಕೋಚ್ ಸೇರಿ ತಲಾ ಒಂದು, ಲಾತೂರ್, ನಾಂದೇಡ್, ಔರಂಗಾಬಾದ್, ತುಳಜಾಪುರ ಹೀಗೆ 25ಕ್ಕೂ ಹೆಚ್ಚು ಬಸ್‌ಗಳು ಸಂಚರಿಸುತ್ತಿದ್ದವು.

ಕೆಲ ದಿನಗಳಿಂದ ಸಿಂಧನೂರ-ಸೊಲ್ಲಾಪುರ, ಜೇವರ್ಗಿ-ಸೊಲ್ಲಾಪುರ, ಕಾಳಗಿ-ಪುಣೆ, ಗುರುಮಠಕಲ್-ಮುಂಬೈ, ಕಲಬುರಗಿ-ಪುಣೆ, ಕಲಬುರಗಿ-ಮುಂಬೈ ಬಸ್‌ಗಾಗಿ ಜನರು ಕಾದು ಕಾದು ಸುಸ್ತಾಗುವಂತಾಗಿದೆ.

ಆಳಂದ ಘಟಕದಿಂದ ಸೊಲ್ಲಾಪುರÀ, ಪುಣೆಗೆ ಮಾತ್ರ ಬಸ್ ಸಂಚರಿಸುತ್ತಿದ್ದು, ಕೂಲಿ ಕಾರ್ಮಿಕರು, ವ್ಯಾಪಾರಸ್ಥರು, ಆಸ್ಪತ್ರೆಗೆ ತೆರಳುವ ಜನರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಅಧಿಕಾರಿಗಳು ಪರಿಶೀಲಿಸಿ ಈ ಮೊದಲಿನಂತೆ ಸಾರಿಗೆ ಬಸ್ ಸೇವೆ ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರಾದ ಗುರುನಾಥ ಹಿರೋಳ್ಳಿ, ಸಂಜು ಸರಸಂಬಾ ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net