ಅಂತಾರಾಜ್ಯ ಮನೆಗಳ್ಳನ ಬಂಧನ

gokul ps
Published on

ಹುಬ್ಬಳ್ಳಿ: ತೆಲಂಗಾಣ ರಾಜ್ಯದ ಖಮ್ಮಂ ಪೊಲೀಸರ ಸಹಾಯದಿಂದ ಇಲ್ಲಿನ ಗೋಕುಲ ರೋಡ್ ಠಾಣೆ ಪೊಲೀಸರು ಸೋಮವಾರ ಕುಖ್ಯಾತ ಮನೆಗಳ್ಳನನ್ನು ಬಂಧಿಸಿ, ಆತನಿಂದ 26 ಲಕ್ಷ ರೂ. ಮೌಲ್ಯದ 900 ಗ್ರಾಂ ಚಿನ್ನಾಭರಣ ಹಾಗೂ 7 ಕೆಜಿ ತೂಕದ ಬೆಳ್ಳಿ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ತೆಲಂಗಾಣ ಪೂರ್ವ ಗೋದಾವರಿ ಜಿಲ್ಲೆ ಮೂಲದ ದ್ವಾರಂಪುಡಿ ವೆಂಕಟೇಶರೆಡ್ಡಿ (28) ಬಂಧಿತ ಆರೋಪಿ. ಈತನ ಸಹಚರ ನಂದೀಪಲ್ಲಿ ವೆಂಕಟವಿನಯ ತಲೆಮರೆಸಿಕೊಂಡಿದ್ದಾನೆ. ಬಂಧಿತನ ವಿರುದ್ಧ ಗೋಕುಲ ರೋಡ್ ಠಾಣೆ ವ್ಯಾಪ್ತಿಯ ಲಕ್ಷ್ಮೀನಗರ, 10ನೇ ಅವಿನ್ಯೂ ರಸ್ತೆ, ಶ್ರೇಯಾ ನಗರ, ವಿನಾಯಕ ನಗರದಲ್ಲಿ ಮನೆಗಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪವಿದೆ ಎಂದು ಪೊಲಿಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net