

ಚಿತ್ರದುರ್ಗ:ನಗರದ ಸಿಇಎನ್ ಠಾಣೆಯಲ್ಲಿ ಜುಲೈ 30ರಂದು ದಾಖಲಾಗಿದ್ದ ಮೂರು ಕೆಜಿಗೂ ಅಧಿಕ ಗಾಂಜಾ ಪತ್ತೆ ಪ್ರಕರಣಕ್ಕೆ ಸಂಬ ಂಧಿಸಿದಂತೆ ಅಂತಾರಾಜ್ಯಗಾಂಜಾ ಫೆಡ್ಲರ್‌ನ್ನು ಬಂಧಿಸಿ,ಮಂಗಳವಾರ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.
ಬಂಧಿತ ಆರೋಪಿಯನ್ನು ಓಡಿಶಾ ಕೋರಪುಟ್ ಜಿಲ್ಲೆಯ ಬನಪದರ ಕೆಂದರ್‌ನ ನಿವಾಸಿ ನೀಲಗೊಲಾರಿ(37)ಎಂದು ಗುರುತಿಸಲಾಗಿ ದೆ.ದಾಖಲಾಗಿದ್ದ ಪ್ರಕರಣದ ಆರೋಪಿತರಿಗೆ ಗಾಂಜಾ ಪೂರೈಸುತ್ತಿದ್ದ ಎಂಬ ಮಾಹಿತಿ ಆಧರಿಸಿ ಸಿಇಎನ್ ಠಾಣೆ ಎಎಸ್‌ಐ ಅಂಜನಪ್ಪ, ಸಿಬ್ಬಂ ದಿ ಸಿದ್ದಲಿಂಗಯ್ಯಹಿರೇಮಠ,ಭೀಮನಗೌಡ ಪಾಟೀಲ್ ಅವರು ಓಡಿಶಾಕ್ಕೆ ತೆರಳಿ ಆರೋಪಿ ಫೆಡ್ಲರ್‌ನನ್ನು ಬಂಧಿಸಿದ್ದಾರೆ.ಈ ಯಶಸ್ವಿ ಕಾರ‌್ಯಾ ಚರಣೆಯನ್ನು ಶ್ಲಾಘಿಸಿ ಮೂವರು ಪೊಲೀಸರಿಗೆ ಎಸ್‌ಪಿ ರಂಜಿತ್‌ಕುಮಾರ್ ಬಂಡಾರು ಬಹುಮಾನ ಘೋಷಿಸಿದ್ದಾರೆ.