ಅಂತಾರಾಜ್ಯ ಕಳ್ಳನ ಸೆರೆ  -34 ಲಕ್ಷ ರೂ. ಮೌಲ್ಯದ ಸ್ವತ್ತು ವಶ

IMG-20230827-WA0036.jpg
Published on

ದಾವಣಗೆರೆ : ಮೂರು ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ ಕುಖ್ಯಾತ ಅಂತಾರಾಜ್ಯ ಆರೋಪಿಯನ್ನು ಬಂಧಿಸಿರುವ ವಿದ್ಯಾನಗರ ಠಾಣೆ ಪೊಲೀಸರು ಚಿನ್ನಾಭರಣ ಸಹಿತ 34 ಲಕ್ಷ ರೂ. ಮೌಲ್ಯದ ಕಳವು ಸ್ವತ್ತನ್ನು ವಶಪಡಿಸಿಕೊಂಡಿದ್ದಾರೆ.

ತಮಿಳುನಾಡು ರಾಜ್ಯದ ರಾಣೀಪೇಟೆ ಮೂಲದ, ಬೆಂಗಳೂರು ಉತ್ತರಹಳ್ಳಿಯ ಭುವನೇಶ್ವರಿ ನಗರದಲ್ಲಿ ಹಾಲಿ ವಾಸವಿದ್ದ ಮಂಜುನಾಥ ಕಲ್ಕೆರೆ ಆಲಿಯಾಸ್ ಮಂಜಾ ಬಂಧಿತ ಆರೋಪಿ.

15.63 ಲಕ್ಷ ರೂ. ಮೌಲ್ಯದ 210 ಗ್ರಾಂ. ತೂಕದ ವಜ್ರಸಹಿತ ಚಿನ್ನಾಭರಣ ಮತ್ತು ಬಂಗಾರದ ಗಟ್ಟಿ, 13.50 ಲಕ್ಷ ರೂ. ಮೌಲ್ಯದ ಒಂದು ಬ್ರಿಜ್ಜಾ ಕಾರು, ಕೃತ್ಯಕ್ಕೆ ಬಳಸಿದ 4 ಲಕ್ಷ ರೂ. ಬೆಲೆಯ ಸ್ವಿಫ್ಟ್ ಡೀಜರ್ ಕಾರು, 47400 ರೂ. ಮೌಲ್ಯದ ಬೆಳ್ಳಿ ಒಡವೆ, 37 ಸಾವಿರ ರೂ. ಮೌಲ್ಯದ 460 ಅಮೆರಿಕನ್ ಡಾಲರ್ ವಶಪಡಿಸಿಕೊಳ್ಳಲಾಗಿದೆ.

ದಾವಣಗೆರೆ ನಗರ ಡಿವೈಎಸ್ಪಿ ಮಲ್ಲೇಶ್ ದೊಡ್ಡಮನಿ ಮಾರ್ಗದರ್ಶನದಲ್ಲಿ ವಿದ್ಯಾನಗರ ಠಾಣೆಯ ಪ್ರಭಾರ ಡಿವೈಎಸ್ಪಿ ಯಶವಂತಕುಮಾರ್, ಇನ್ಸ್‌ಪೆಕ್ಟರ್ ಪ್ರಭಾವತಿ.ಸಿ.ಶೇತಸನದಿ, ಪಿಎಸ್‌ಐ ಜಿ.ಎಂ.ರೇಣುಕ ಹಾಗೂ ಅವರ ಸಿಬ್ಬಂದಿ ಈ ಕಾರ್ಯಾಚರಣೆ ನಡೆಸಿದ್ದು ಎಸ್ಪಿ ಉಮಾ ಪ್ರಶಾಂತ್ ಶ್ಲಾಘಿಸಿದ್ದಾರೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net