

ಹಾಸನ : ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಕಳ್ಳತನ ಮಾಡುತ್ತಿದ್ದ ಅಂತರ್‌ಜಿಲ್ಲಾ ಕಳ್ಳನನ್ನು ಬಂಧಿಸಲಾಗಿದ್ದು, ಆತನಿಂದ 3.34 ಲಕ್ಷ ರೂ. ಮೌಲ್ಯದ ಬೆಳ್ಳಿ ಮತ್ತು ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ತಿಳಿಸಿದರು
ಎಸ್‌ಪಿ ಕಚೇರಿಯಲ್ಲಿ ಗುರುವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ಶಾಂತಿನಗರದ ಲಿಂಗೇಶ್ (42)ಎಂಬಾತನನ್ನು ಬಂಧಿಸಲಾಗಿದ್ದು, ಈತನಿಂದ 65 ಗ್ರಾಂ ಚಿನ್ನಾಭರಣ,150 ಗ್ರಾಂ ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.
ಜೂನ್ 11 ರಂದು ಬೆಂಗಳೂರಿನ ಯಲಹಂಕದ ಚೈತ್ರ ಎಂಬುವವರು ಹೊಳೆನರಸೀಪುರಕ್ಕೆ ಸಂಬಂಧಿಕರ ಮದುವೆಗೆಂದು ಆಗಮಿಸಿದ್ದು, ಈವೇಳೆ ಜೂ.12ರಂದು ಹೊಳೆನರಸೀಪುರದ ವೀರಭಧ್ರೇಶ್ವರ ಕಲ್ಯಾಣ ಮಂಟಪದಲ್ಲಿ ಮದುವೆ ಮುಗಿಸಿ,ನಂತರ ಬೆಂಗಳೂರಿಗೆ ಹೋಗಲು
ಬಸ್ ಹತ್ತುವ ವೇಳೆ ಬ್ಯಾಗಿನಲ್ಲಿದ್ದ 35 ಗ್ರಾಂ ಚಿನ್ನದ ನೆಕ್ಲೆಸ್, 15 ಗ್ರಾಂ ಓಲೆ ಕಳುವಾಗಿರುವ ಬಗ್ಗೆ ದೂರು ನೀಡಿದ್ದ ಹಿನ್ನೆಲೆಯಲ್ಲಿ ನಮ್ಮ ತಂಡ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ ಎಂದರು.
ಆರೋಪಿ ಲಿಂಗೇಶ್ 2003 ರಿಂದ ಇಲ್ಲಿಯವರೆಗೆ ಹೊ.ನ.ಪುರದಲ್ಲಿ 3, ಬಳ್ಳಾರಿಯಲ್ಲಿ 2, ಉಡುಪಿ ಮತ್ತು ತುಮಕೂರಿನಲ್ಲಿ ತಲಾ ಒಂದೊಂದು ಪ್ರಕರಣದಲ್ಲಿ ಭಾಗಿಯಾಗಿದ್ದು, ಈಗ ಬಂಧಿತನಿಂದ ಒಟ್ಟು 65 ಗ್ರಾಂ ಚಿನ್ನ ವಶಪಡಿಸಿಕೊಳ್ಳಲಾಗಿದ್ದು, ಹೆಚ್ಚಿನ ತನಿಖೆಗೆ ಒಳಪಡಿಸಲಾಗಿದೆ ಎಂದು ಹೇಳಿದರು.