ಅಂತರ್ಜಾಲ ಬಳಕೆ ರದ್ದಾಗಲಿ, ಪುಸ್ತಕ ಸಂಸ್ಕೃತಿ ಹೆಚ್ಚಲಿ: ಬರಹಗಾರ ಡಾ.ಪಿ.ಸಾಯಿನಾಥ್

mysore
Published on

ಮೈಸೂರು: ಪುಸ್ತಕ ಸಂಸ್ಕೃತಿಯನ್ನು ಜಾರಿಗೆ ತರುವ ಮೂಲಕ ಶಿಕ್ಷಣದಲ್ಲಿ ಸಾವಾಜಿಕ ಸುಧಾರಣೆ ಮಾಡಬಹುದಾಗಿದೆ ಎಂದು ಅಂಕಣಕಾರ ಹಾಗೂ ಬರಹಗಾರ ಡಾ.ಪಿ.ಸಾಯಿನಾಥ್ ಹೇಳಿದರು.

ಮೈಸೂರು ಸಾಹಿತ್ಯ ಸಂಸ್ಥೆ ವತಿಯಿಂದ ನಗರದ ಮಹಾರಾಜ ಕಾಲೇಜು ಶತವಾನೋತ್ಸವ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ಮೈಸೂರು ಸಾಹಿತ್ಯ ಹಬ್ಬವನ್ನು ಉದ್ಘಾಟಿಸಿ ವಾತನಾಡಿದರು.

2009ರಲ್ಲಿ ಸ್ವೀಡನ್ ಶಾಲೆಗಳಲ್ಲಿ ಪುಸ್ತಕ ಬಳಸುವ ವ್ಯವಸ್ಥೆ ರದ್ದು ವಾಡಿ ಕೇವಲ ಆನ್‌ಲೈನ್ ಮೂಲಕ ಶಿಕ್ಷಣ ನೀಡುವ ವ್ಯವಸ್ಥೆ ಅನುಷ್ಠಾನಕ್ಕೆ ತಂದಿತು. ಕಾಲ ಕ್ರಮೇಣ ವಿದ್ಯಾರ್ಥಿಗಳಲ್ಲಿ ಅಂತರ್ಜಾಲ ಬಳಕೆಯಿಂದ ಆ ಮಕ್ಕಳ ಮಿದುಳಿನಲ್ಲಿ ಗ್ರಹಣ ಶಕ್ತಿ ಕುಗ್ಗಿತು. ಹೀಗಾಗಿ, ಸಹಸ್ರಾರು ಮಿಲಿಂುನ್ ಯೂರೋಗಳನ್ನು ಖರ್ಚು ಮಾಡಿ ಶಿಕ್ಷಣದಲ್ಲಿ ಅಂತರ್ಜಾಲ ಬಳಕೆ ರದ್ದು ವಾಡಿ ಮತ್ತೆ ಪುಸ್ತಕ ಸಂಸ್ಕೃತಿಯನ್ನು ಮರು ಪರಿಚಯಿಸಲಾಯಿತು. ಇದು ನಮ್ಮಲ್ಲೂ ಅನುಷ್ಠಾನಕ್ಕೆ ಬರಬೇಕು ಎಂದರು.

ಆಧುನಿಕ ಯುಗದಲ್ಲಿ ಪುಸ್ತಕ ಓದುವ ಅಭ್ಯಾಸ ಕಡಿಮೆಯಾಗಿದೆ ಎಂಬುದು ನಿಜ. ಈ ಕಾಲಘಟ್ಟದಲ್ಲೂ ಪುಸ್ತಕಗಳು ವ್ಯಕ್ತಿ ಹಾಗೂ ಸವಾಜದ ಅಭಿವೃದ್ಧಿಗೆ ಅನಿವಾರ್ಯವಾಗಿದೆ ಎಂದರು.

1991ರಲ್ಲಿ ಭಾರತದಲ್ಲಿ ಒಬ್ಬ ಬಿಲಿಯನೇರ್ ಇರಲಿಲ್ಲ. ಆದರೆ, ಈಗ 211 ಬಿಲಿಯನೇರ್‌ಗಳಿದ್ದಾರೆ. ಅದರಲ್ಲಿ ಒಬ್ಬ ಶ್ರೀಮಂತ ದೇಶದ ಸಾವಾನ್ಯ ವರ್ಗದವರು ಒಂದು ವಾರದಲ್ಲಿ 90 ದಿನಗಳ ಕೆಲಸವನ್ನು ವಾಡಬೇಕೆಂದು ಹೇಳುತ್ತಾರೆ. ಇಂತಹ ಅವೈಜ್ಞಾನಿಕ, ಕ್ರೂರಿ ಸಲಹೆಗಳಿಂದ ಸಾವಾನ್ಯ ವರ್ಗದವರ ಆರೋಗ್ಯ, ಶಿಕ್ಷಣ, ಜೀವನ ಹೇಗೆ? ಈ ಕುರಿತು ಯಾರಾದರೂ ಆಲೋಚಿಸಿದ್ದಾರೆಯೇ? ಎಂದು ಪ್ರಶ್ನಿಸಿದರು.

ಮೈಸೂರು ಲಿಟರರಿ ಅಸೋಸಿಂೆುೀಷನ್ ಅಧ್ಯಕ್ಷ ಹಾಗೂ ರಾಜೀವ್ ಗಾಂಧಿ ವಿವಿ ವಿಶ್ರಾಂತ ಕುಲಪತಿ ಪ್ರೊ.ಕೆ.ಸಿ.ಬೆಳ್ಳಿಯಪ್ಪ, ಅಸೋಸಿಯೇಷನ್ ಗೌರವ ಕಾಂರ್ುದರ್ಶಿ ರೆಜಿನಾಲ್ಡ್ ವೆಸ್ಲಿ, ಕಾರ್ಯಕಾರಿ ಸಮಿತಿ ಸದಸ್ಯರಾದ ಅನಿತಾ ವಿಮಲ ಬ್ರಾಗ್ಸ್, ನಿರ್ಮಲಾ ಚಂದ್ರಪ್ರಕಾಶ್, ಹರಿದಾಸ್, ಪ್ರೊ.ಸಿ.ನಾಗಣ್ಣ, ಪ್ರೊ.ಬಾಲಾಜಿ ಇನ್ನಿತರರಿದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net