

ಕೊಳ್ಳೇಗಾಲ: ಆಡಂಬರ ಮತ್ತು ಪ್ರಚಾರಕ್ಕಾಗಿ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳದೆ ನಮ್ಮ ಮನಸ್ಸಾಕ್ಷಿ, ಅಂತರಾತ್ಮ ಒಪ್ಪುವ ರೀತಿಯಲ್ಲಿ ಮಾನವೀಯ ಸೇವೆಗಳನ್ನು ಆಯೋಜಿಸಬೇಕೆಂದು ರೋಟರಿ ಜಿಲ್ಲಾ ಪ್ರಾಂತಪಾಲ ವಿಕ್ರಮ್ ದತ್ತ ಹೇಳಿದರು.
ಪಟ್ಟಣದ ರೋಟರಿ ಭವನದಲ್ಲಿ ಭಾನುವಾರ ರೋಟರಿ ಸಂಸ್ಥೆ, ರೋಟರಿ ಮಿಡ್‌ಟನ್, ಸೌಜನ್ಯ ರೋಟರಿ ಸಮುದಾಯದಳ ಸಹಯೋಗದಲ್ಲಿ ಆಯೋಜಿಸಿದ್ದ ರೋಟರಿ ಸಮುದಾಯದಳಗಳ ಜಿಲ್ಲಾ ಸಮ್ಮೇಳನ ಉದ್ದೇಶಿಸಿ ಮಾತನಾಡಿದರು.ಸುಂದರ ಸದೃಢ ಸಮಾಜವನ್ನು ನಿರ್ಮಿಸುವಲ್ಲಿ ರೋಟರಿ ಮತ್ತು ರೋಟರಿ ಸಮುದಾಯದಳಗಳ ಪಾತ್ರ ಮಹತ್ವದ್ದಾಗಿದೆ ಎಂದು ಹೇಳಿದರು.
ರೋಟರಿ ಸಮುದಾಯಗಳ ಜಿಲ್ಲಾ ಚೇರ್ಮನ್ ಡಿ.ವೆಂಕಟಾಚಲ ಮಾತನಾಡಿ, ರೋಟರಿ ಸಮುದಾಯದಳಗಳ ಬಗ್ಗೆ ವಿಶೇಷ ಕಾಳಜಿಯನ್ನು ಹೊಂದಿ ಸಮ್ಮೇಳನವನ್ನು ಯಶಸ್ವಿಯಾಗಿ ಆಯೋಜಿಸಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಈ ಸಂದರ್ಭದಲ್ಲಿ ರೋಟರಿ ಜಿಲ್ಲಾ ಪ್ರಾಂತಪಾಲರ ಸಲಹೆಗಾರ ಬಿ.ಶೇಖರ್‌ಶೆಟ್ಟಿ, ನಿಯೋಜಿತ ಜಿಲ್ಲಾ ಪ್ರಾಂತಪಾಲ ರಾಮಕೃಷ್ಣ, ಸತೀಶ್ ಬೋಳಾರ್, ಯಶಸ್ವಿನಿ ಸೋಮಶೇಖರ್, ಹರೀಶ್ ಶೆಟ್ಟಿ ಜಿಲ್ಲಾ ಚೇರ್‌ಮೆನ್ ಡಿ.ವೆಂಕಟಾಚಲ, ಹತ್ತಳ್ಳಿ ಕೆಂಪೇಗೌಡ, ಸಹಾಯಕ ಪ್ರಾಂಪತಾಲ ಗಿರೀಶ್ ಜಡೆ, ಮಾಣಿಕ್ಯಚಂದ್, ಜೋನಲ್ ಲಿಫ್ಟಿನೆಂಟ್ ಮುತ್ತು ಕುಮಾರ್, ನಂದೀಶ್ ರೋಟರಿ ಲೀಡರ್‌ಶಿಪ್ ಇನ್ಸ್‌ಟಿಟ್ಯೂಟ್ ಚೇರ್ಮನ್ ಹರೀಶ್, ಸೌಜನ್ಯ ರೋಟರಿ ಸಮುದಾಯದಳದ ಚೇರ್ಮನ್ ರಾಜೇಂದ್ರ, ರೋಟರಿ ಅಧ್ಯಕ್ಷೆ ಸರಸ್ವತಿ ಹೊನ್ನಪ್ಪ ಮತ್ತಿತರಿದ್ದರು.