ಅಂತರರಾಷ್ಟ್ರೀಯ ಕರಾಟೆ ಪಂದ್ಯಾವಳಿಗೆ ಆಯ್ಕೆ

ಅಂತರರಾಷ್ಟ್ರೀಯ ಕರಾಟೆ ಪಂದ್ಯಾವಳಿಗೆ ಆಯ್ಕೆ
Published on

ಹಾಸನ: ಶಿವಮೊಗ್ಗದ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ಆಗಸ್ಟ್ 5ರಿಂದ ನಡೆಯುವ ಶಿವಮೊಗ್ಗ ಓಪನ್ ನಾಲ್ಕನೇ ಅಂತರರಾಷ್ಟ್ರೀಯ ಕರಾಟೆ ಪಂದ್ಯಾವಳಿಗೆ ಜಿಲ್ಲೆಯಿಂದ ಸುಮಾರು ಐವತ್ತು ವಿದ್ಯಾರ್ಥಿಗಳು ಭಾಗವಹಿಸುತ್ತಿದ್ದಾರೆ ಎಂದು ಜಿಲ್ಲಾ ಕರಾಟೆ ಸಂಸ್ಥೆಯ ಅಧ್ಯಕ್ಷ ಮೊಹಮ್ಮದ್ ಆರಿಫ್ ತಿಳಿಸಿದರು.

ಎರೆಡು ದಿನ ನಡೆಯುವ ಕರಾಟೆ ಪಂದ್ಯಾವಳಿಗೆ ಹಾಸನ ಜಿಲ್ಲಾ ಕರಾಟೆ ಸಂಸ್ಥೆಯಿಂದ ಕರಾಟೆ ಪಟುಗಳು ಕಟ ಮತ್ತು ಕುಮಿಟೆ ವಿಭಾಗದಲ್ಲಿ ಭಾಗವಹಿಸುತ್ತಿದ್ದಾರೆ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಆಗಸ್ಟ್ 4 ರಂದು ಅಮೆರಿಕದಲ್ಲಿ ನಡೆಯುವ ಬ್ಲಾಕ್ ಬೆಲ್ಟ್ ಪರೀಕ್ಷೆಯಲ್ಲಿ ನಗರದ ವಿದ್ಯಾರ್ಥಿಗಳಾದ ಧನುಷ್ ಟಿ.ಸಿ, ಸೈಯದ್, ಖಮ್ರನ್ , ಧವನ್ ವೈ ಗೌಡ, ಆರ್ಪರ್ಜ್ , ನಿಹಾಲ್, ಆಯುಷ್, ಸದೈನ್, ಕೌನೇನ್ ಹಾಗೂ ಸಾಫ್ರಾಜ್ ಭಾಗವಹಿಸುತ್ತಿದ್ದಾರೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸುಫಿಯಾ, ಭಾಷಾ, ಇತರರು ಇದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net