ಅಂತರಂಗ ಹಸನಾದರೆ ಬಾಹ್ಯ ಅಂಗಗಳು ಸಕ್ರಿಯ

Published on

ಗುಂಡ್ಲುಪೇಟೆ: ಪ್ರತಿಯೊಬ್ಬರೂ ಯೋಗ ಮಾಡುವುದರಿಂದ ಉತ್ತಮ ಆರೋಗ್ಯ ಹಾಗೂ ಲವಲವಿಕೆಯಿಂದ ಜೀವನ ನಡೆಸಲು ಸಾಧ್ಯ ಎಂದು ಮದ್ದಾನೇಶ್ವರ ಯೋಗ ಕೇಂದ್ರದ ಯೋಗಶಿಕ್ಷಕ ವೀರನಪುರ ಬಸವಣ್ಣ ಹೇಳಿದರು.

ಪಟ್ಟಣದ ಮದ್ದಾನೇಶ್ವರ ಮಹಾಮನೆಯಲ್ಲಿ ನಂ.1 ಕನ್ನಡ ದಿನಪತ್ರಿಕೆ ವಿಜಯವಾಣಿ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ 11ನೇ ಅಂತಾರಾಷ್ಟ್ರೀಯ ಯೋಗ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು. ನಿತ್ಯ ಯೋಗಾಭ್ಯಾಸ ಮಾಡುವವರ ದೇಹ, ಮನಸ್ಸು ಹಾಗೂ ಚಿತ್ತ ಶುದ್ಧವಾಗುತ್ತದೆ. ಅಂತರಂಗ ಹಸನಾದರೆ ಬಾಹ್ಯ ಅಂಗಗಳು ಸಕ್ರಿಯವಾಗಲಿವೆ. ಮಕ್ಕಳಿಗೆ ಬಾಲ್ಯದಿಂದಲೇ ಯೋಗಾಭ್ಯಾಸ ಮಾಡಿಸುವುದರಿಂದ ಅವರ ದೇಹ ಮತ್ತು ಮನಸ್ಸು ಸಕ್ರಿಯವಾಗಲು ನೆರವಾಗುತ್ತದೆ. ಆದ್ದರಿಂದ ಎಲ್ಲ ವಯಸ್ಸಿನವರು ಯೋಗ ಚಟುವಟಿಕೆಯಲ್ಲಿ ಭಾಗವಹಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಸೂರ್ಯ ನಮಸ್ಕಾರ ಸೇರಿದಂತೆ ನಾನಾ ಆಸನಗಳು, ಪ್ರಾಣಾಯಾಮ, ಭಸ್ತಿಕಾ, ಭ್ರಮರಿ ಮುಂತಾದ ಉಸಿರಾಟದ ಅಭ್ಯಾಸಗಳನ್ನು ಪ್ರದರ್ಶನ ಮಾಡಿದರು. ಮದ್ದಾನೇಶ್ವರ ಯೋಗ ಕೇಂದ್ರದ ಅಧ್ಯಕ್ಷ ಕೆ.ವಿ.ಶ್ರೀನಿವಾಸ್, ಯೋಗಶಿಕ್ಷಕರಾದ ಕೆ.ಸಿ.ರಾಜಪ್ಪ, ನಾಗೇಶ್, ಅಧ್ಯಕ್ಷ ಕೆ.ವಿ.ಶ್ರೀನಿವಾಸ್, ಗಿರೀಶ್, ಕೇಶವ್, ರೇವಣ್ಣ, ಬಿಜೆಪಿ ಮಂಡಲಾಧ್ಯಕ್ಷ ಸಿ.ಮಹದೇವಪ್ರಸಾದ್, ಸುನಿಲ್, ಭಗವಾನ್, ಮಹದೇವಮ್ಮ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net