ಅಂತರAಗದ ಕಲ್ಯಾಣವಾದಾಗ ಜೀವನ ಸಾರ್ಥಕ

ydg02
Published on

ಗುರುಮಠಕಲ್: ಲೋಕ ಕಲ್ಯಾಣವಾಗಬೇಕಾದರೆ ಹೊರಡೆ ಆದರೆ ಅಷ್ಟೇ ಅಲ್ಲ ಅಂತರAಗದ ಕಲ್ಯಾಣವಾದಾಗ ಮಾತ್ರ ಸಾರ್ಥಕ ಜೀವನ ನಡೆಸಲು ಸಾಧ್ಯ ಎಂದು ಖಾಸಾಮಠದ ಶ್ರೀ ಶಾಂತವೀರ ಗುರುಮುರುಘರಾಜೇಂದ್ರ ಸ್ವಾಮೀಜಿ ನುಡಿದರು.

ಇಲ್ಲಿನ ವೀರಭದ್ರೇಶ್ವರ ದೇವಸ್ಥಾನದಲ್ಲಿ ನಾಡಿನ ಜನತೆಯ ಒಳಿತಿಗಾಗಿ ಶನಿವಾರ ಹಮ್ಮಿಕೊಂಡ ಮಂಡಲಪೂಜೆ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನಿಡಿದ ಅವರು, ಕಲ್ಯಾಣ ಎಂಬುದು ಹೊರಗಡೆ ಅಷ್ಟೇ ಅಲ್ಲ ಪ್ರತಿಯೊಬ್ಬರ ಅಂತರAಗದ ಕಲ್ಯಾಣವಾದಾಗ ಮಾತ್ರ ಜನ ಕಲ್ಯಾಣವಾಗಲು ಸಾಧ್ಯ. ಶರಣೆ ಅಕ್ಕಮಹಾದೇವಿ ತಮ್ಮ ವಚನಗಳಲ್ಲಿ ಹೇಳಿರುವಂತೆ ಪ್ರತಿಯೊಬ್ಬರ ಜೀವನ ಕಲ್ಯಾಣವಾಗಬೇಕಾದರೆ ಲೋಕ ಕಲ್ಯಾಣ ಹಾಗೂ ಆತ್ಮ ಕಲ್ಯಾಣವಾಗಬೇಕು ಎಂದರು.

ವೇದಮೂರ್ತಿ ಮಲ್ಲಿಕಾರ್ಜುನ ಸ್ವಾಮಿ ನೇತೃತ್ವದಲ್ಲಿ ಕಲ್ಯಾಣೋತ್ಸವದ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದರು. ಬೆಳಗ್ಗೆಯಿಂದಲೇ ರುದ್ರಾಭಿಷೇಕ, ಶಾಂತಿಪೂಜೆ, ಮಂಗಳ ಸ್ನಾನ, ವಧು ನಿರೀಕ್ಷಣೆ, ಅರಶಿನ ಕುಂಕುಮ ಸಮರ್ಪಣೆ, ಧಾರೆಮಣಿ ಕಟ್ಟುವಿಕೆ, ಮಧುಪರ್ಕ ಸಮರ್ಪಣೆ, ಮಾಲಾಧಾರಣೆ, ಕನ್ಯಾದಾನ, ಕಂಕಣ ಮಾಂಗಲ್ಯ, ಸೂತ್ರ ಧಾರಣೆ, ಚಿನ್ನಾಭರಣ ಕಪ್ಪ ಕಾಣಿಕೆಗಳ ಸಮರ್ಪಣೆ ಸೇರಿ ವಿವಿಧ ಪೂಜೆಗಳನ್ನು ಶ್ರದ್ಧಾಭಕ್ತಿಯಿಂದ ನೆರವೇರಿಸಲಾಯಿತು.

ನಾಗಠಾಣ ಹಿರೇಮಠದ ಶ್ರೀ ಸೋಮೇಶ್ವರ ಶಿವಾಚಾರ್ಯರು ವೀರಭದ್ರಸ್ವಾಮಿ ಮೂರ್ತಿ ಪ್ರತಿಷ್ಠಾಪನೆ ನೇತೃತ್ವ ವಹಿಸಿದ್ದರು. ವೀರಶೈವ ಸಮಾಜದ ಹಿರಿಯ ಮುಖಂಡ ಡಾ.ಭೀಮಾಶಂಕರ ಮುತ್ತಗಿ ಪರಿವಾರದಿಂದ ಬೆಳ್ಳಿಯ ಕಿರೀಟ ಅರ್ಪಿಸಲಾಯಿತು. ಕಲ್ಯಾಣ ಉತ್ಸವಕ್ಕೆ ಸಮಸ್ತ ವೀರಭದ್ರೇಶ್ವರ ಸ್ವಾಮಿ ಭಕ್ತರು ವಿವಿಧೆಡೆಯಿಂದ ಆಗಮಿಸಿ ದರ್ಶನಾಶೀರ್ವಾದ ಪಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net