

ಮೈಸೂರು: ಸರಸ್ವತಿಪುರಂನ ಮಹಾಬೋಧಿ ಶಾಲೆಯಿಂದ ಎರಡು ದಿನಗಳ ರಾಜ್ಯಮಟ್ಟದ ಅಂತರ ಶಾಲಾ ಫುಟ್‌ಬಾಲ್ ಪಂದ್ಯಾವಳಿಗೆ ಸೋಮವಾರ ಚಾಲನೆ ನೀಡಲಾಯಿತು.
ಮೈಸೂರು ವಿಶ್ವವಿದ್ಯಾಲಯದ ಪೆವಿಲಿಯನ್ ಮೈದಾನದಲ್ಲಿ ಪಂದ್ಯಾವಳಿಗೆ ಚಾಲನೆ ನೀಡಿದ ಡಿಡಿಪಿಐ ರಾಮಚಂದ್ರರಾಜೇ ಅರಸ್ ಅವರು, ಪಂದ್ಯಾವಳಿ 14 ವರ್ಷ ಹಾಗೂ 17 ವರ್ಷ ಒಳಪಟ್ಟವರ ವಿಭಾಗದಲ್ಲಿ ನಡೆಯುತ್ತಿದ್ದು, 20ಕ್ಕೂ ಹೆಚ್ಚು ತಂಡಗಳು ಭಾಗವಹಿಸುತ್ತವೆ. ಸಣ್ಣ ಶಿಕ್ಷಣ ಸಂಸ್ಥೆಯೊಂದು ರಾಜ್ಯಮಟ್ಟದ ುಟ್‌ಬಾಲ್ ಪಂದ್ಯಾವಳಿಯನ್ನು ಅಚ್ಚುಕಟ್ಟಾಗಿ ಆಯೋಜಿಸಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಶಿಕ್ಷಣದ ಜತೆಗೆ ಕ್ರೀಡೆಗೆ ಸಮಾನ ಆದ್ಯತೆ ನೀಡಿರುವ ಮಹಾಬೋದಿ ಶಾಲೆ, ವಿದ್ಯಾರ್ಥಿಗಳಿಗೆ ನಾನಾ ಕ್ರೀಡೆಗಳಲ್ಲಿ ಪಾಲ್ಗೊಳ್ಳಲು ವೇದಿಕೆ ನೀಡಿದೆ. ಇದರಿಂದ ಬೇರೆ ಶಾಲೆಯ ಮಕ್ಕಳಿಗೂ ತಮ್ಮ ಕ್ರೀಡಾ ಸಾಮರ್ಥ್ಯ ಪರೀಕ್ಷಿಸಿಕೊಳ್ಳಲು ಸಾಧ್ಯವಾಗುತ್ತಿದೆ. ಇದೇ ರೀತಿ ಕ್ರೀಡೆಗೆ ಪ್ರೋತ್ಸಾಹದಾಯಕ ಚಟುವಟಿಕೆಗಳು ಹೆಚ್ಚಾಗಬೇಕು ಎಂದು ಸಲಹೆ ನೀಡಿದರು.
ಸಿಎನ್‌ಸಿ ಗ್ರೂಪ್ ಕಮಾಂಡರ್ ಕರ್ನಲ್ ಆರ್‌ಆರ್ ಮೆನನ್, ಶಾಲೆಯ ಬಿಕ್ಕು ಸೋಬಾನ ಬಂತೇಜಿ, ಸಿಇಒ ಜಿಕ್ಮೆಟ್ ವಾಂಗ್ಡಸ್ ಜ್ಯೋತಿ, ಶಿಕ್ಷಣ ಸಂಯೋಜಕ ವೆಂಕಟೇಶ್ವ್ವರಲು, ಪ್ರಾಂಶುಪಾಲ ದ್ವಾರಕೀಶ್, ಸೀನಿಯರ್ ಕೋಚ್ ತಾಸಿ ಅತ್ತೋ ಇತರರು ಇದ್ದರು.