ಅಂತರ ವಿವಿ ಪಂದ್ಯಕ್ಕೆ ಗುರುಕುಲ ವಿದ್ಯಾರ್ಥಿಗಳು

1002Klb09
Published on

ಕಲಬುರಗಿ: ನಗರದ ಗುರುಕುಲ ಪದವಿ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಅಂತರ ವಿವಿ ಕ್ರಿಕೆಟ್ ಪಂದ್ಯಾವಳಿಗೆ ಆಯ್ಕೆಯಾಗಿದ್ದಾರೆ. ಗುವಿವಿಯಲ್ಲಿ ಜ.೬ರಂದು ನಡೆದ ಅಂತರ ಮಹಾವಿದ್ಯಾಲಯ ಕೋಚಿಂಗ್ ಕ್ಯಾಂಪ್ ಕ್ರಿಕೆಟ್ ಪಂದ್ಯಾವಳಿಗೆ ನಡೆದ ವಿದ್ಯಾರ್ಥಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಕಾಲೇಜಿನ ವಿದ್ಯಾರ್ಥಿಗಳಾದ ಓಂ ರಂಜೋಳ್ಕರ್, ನಂದೀಶ ಹುಳಗೋಳಕರ್ ಆಯ್ಕೆಯಾಗಿದ್ದಾರೆ. ಜ.೧೬ರಿಂದ ೨೧ರವರೆಗೆ ತಮಿಳುನಾಡಿನ ಚೆನ್ನೆÊನಲ್ಲಿ ನಡೆಯಲಿರುವ ಅಂತರ ವಿವಿ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ವಿದ್ಯಾರ್ಥಿಗಳ ಸಾಧನೆಗೆ ಜಾಜಿ ಶಿP್ಷÀಣ ಸಂಸ್ಥೆ ನಿರ್ದೇಶಕರು, ಪ್ರಾಂಶುಪಾಲ ಡಾ.ವಿಲಾಸ ಬಗಾಡೆ, ಅಭಿವೃದ್ಧಿ ಅಧಿಕಾರಿ ವಾಮಾನಾಚಾರ್ಯ, ಮಾನವ ಸಂಪನ್ಮೂಲ ವ್ಯಕ್ತಿ ರಮೇಶ ಕುಲಕರ್ಣಿ, ವಿಜಯ ರಾಜಪ್ಪಗೋಳ, ಪಲ್ಲವಿ ಪಾಟೀಲ್ ಹರ್ಷ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net