ಅಂತರ ರಾಜ್ಯ ಸಮ್ಮೇಳನಾಧ್ಯಕ್ಷರಾಗಿ ಪ್ರದೀಪ್‌ಕುಮಾರ್ ಆಯ್ಕೆ

12 ckm 5 pradeep kumar
ಡಾ. ಪ್ರದೀಪ್‌ಕುಮಾರ್
Published on

ಚಿಕ್ಕಮಗಳೂರು: ಅಂತರ ರಾಜ್ಯ ಪ್ರಪ್ರಥಮ ಕನ್ನಡ ಸಾಹಿತ್ಯ ಪರಿಷತ್ತಿನ ಸಮ್ಮೇಳನದ ಅಧ್ಯಕ್ಷರಾಗಿ ಡಾ. ಪ್ರದೀಪ್‌ಕುಮಾರ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆಗಸ್ಟ್ ೨೨ರಂದು ಆಂಧ್ರಪ್ರದೇಶದ ಮಂತ್ರಾಲಯ ರಾಘವೇಂದ್ರ ಸ್ವಾಮಿ ಮಠದ ಆವರಣದಲ್ಲಿ ಚಿಕ್ಕ ಮಗಳೂರು ಜಿಲ್ಲೆ, ಆಂಧ್ರಪ್ರದೇಶ, ತೆಲಂಗಾಣ, ಗೋವಾ ಮತ್ತು ಮಹಾರಾಷ್ಟç ರಾಜ್ಯಗಳ ಸಂಯುಕ್ತಾಶ್ರಯ ದಲ್ಲಿ ಆಯೋಜಿಸಿರುವ ಸಮ್ಮೇಳನಕ್ಕೆ ಅಧ್ಯಕ್ಷರಾಗಿ ಡಾ. ಪ್ರದೀಪ್‌ಕುಮಾರ್ ಅವರನ್ನು ಸರ್ವನುಮತದಿಂದ ಆಯ್ಕೆ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಉಡುಪಿ ಜಿಲ್ಲೆಯ ಹೆಬ್ರಿಯಲ್ಲಿ ಜನಿಸಿದ ಡಾ. ಪ್ರದೀಪ್ ಕುಮಾರ್ ಹೆಬ್ರಿ ಅವರು ಕಳೆದ ೩೫ ವರ್ಷದಿಂದ ವೈದ್ಯಕೀಯ ವೃತ್ತಿಯನ್ನು ಕೈಗೊಂಡು ಮಂಡ್ಯದಲ್ಲಿ ನೆಲೆಸಿದ್ದಾರೆ. ಆದರೆ ಪೂರ್ಣಕಾಲಿಕ ಸಾಹಿತಿ ಎನ್ನುವಷ್ಟರ ಮಟ್ಟಿಗೆ ಸಮೃದ್ದ ಸಾಹಿತ್ಯವನ್ನು ಸೃಷ್ಟಿಸಿರುವ ಡಾ. ಪ್ರದೀಪ್ ಕುಮಾರ್ ಅವರು ೨೨೦ ಸಾಹಿತ್ಯ ಕೃತಿಗಳನ್ನು ಪ್ರಕಟಿಸಿದ್ದಾರೆ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net