ಅಂತರ ಬೆಳೆಯಿಂದ ಲದ್ದಿ ಹುಳು ನಿಯಂತ್ರಣ

CTD MAGE
Published on

ಚಿತ್ರದುರ್ಗ: ಮೆಕ್ಕೆಜೋಳದ ಜತೆ ಅಂತರ ಬೆಳೆಯಾಗಿ ತೊಗರಿ ನಾಟಿ ಮಾಡಿದರೆ ಲದ್ದಿಹುಳುಗಳ ಕಾಟವನ್ನು ನಿಯಂತ್ರಿಸಬಹುದಾಗಿದೆ ಎಂದು ಹಿರಿಯೂರು ತಾಲೂಕು ಬಬ್ಬೂರು ಫಾರಂ ಕೃಷಿ ವಿಜ್ಞಾನ ಕೇಂದ್ರದ ಕೀಟ ಶಾಸ್ತ್ರಜ್ಞ ಡಾ.ಎಸ್.ಓಂಕಾರಪ್ಪ ಹೇಳಿದರು.
ಚಿತ್ರದುರ್ಗ ತಾಲೂಕು ವಿಜಾಪುರ ಗ್ರಾಮದ ರೈತ ಮಂಜುನಾಥ್ ಅವರ ಮೆಕ್ಕೆಜೋಳ ತಾಕಿಗೆ ಶನಿವಾರ ಭೇಟಿ ನೀಡಿ ಲದ್ದಿ ಹುಳು ಬಾಧೆ ಕುರಿತು ಪರಿಶೀಲಿಸಿ,ಹತೋಟಿ ಕ್ರಮಗಳ ಕುರಿತು ರೈತರಿಗೆ ಸಲಹೆ ನೀಡಿದರು. ಇನ್ನೂ ಮೆಕ್ಕೆಜೋಳ ಬಿತ್ತದವರು ತಲಾ 8 ಸಾಲಿಗೆ ಒಂದರಂತೆ ತೊಗರಿ ಬಿತ್ತುವುದರಿಂದ ಈ ಕೀಟ ಭಾದೆ ನಿಯಂತ್ರಿಸಬಹುದಾಗಿದೆ.
ಈಗಾಗಲೇ ಬಿತ್ತಿರುವ ಮೆಕ್ಕೆಜೋಳ ಹೊಲದಲ್ಲಿ ಲದ್ದಿಹುಳ ಕಾಣಿಸಿಕೊಂಡಿದ್ದರೆ ಸೂಕ್ತ ಕೀಟನಾಶಕವನ್ನು ಸುಳಿಯೊಳಗೆ ಸಿಂಪಡಿಸ ಬೇ ಕು. ಇದರಿಂದ ಪರಿಣಾಮಕಾರಿಯಾಗಿ ಹುಳು ಕಾಟವನ್ನು ಹತೋಟಿಗೆ ತರಬಹುದು. ಎಲೆ ಕೆಳಗೆ ಗುಂಪು,ಗುಂಪಾಗಿರುವ ಮೊಟ್ಟೆಗಳನ್ನು ಗುರುತಿಸಿ ಔಷಧ ಸಿಂಪಡಿಸಬೇಕು. ಎಕರೆಗೆ 5 ಮೋಹಕ ಬಲೆಗಳನ್ನು ಅಳವಡಿಸಬೇಕು. ರೈತರು ನಿರಂತರವಾಗಿ ಮೆಕ್ಕೆಜೋಳ ಬೆಳೆಯುತ್ತಿದ್ದರೆ ಬೆಳೆ ಪರಿವರ್ತನೆ ಮಾಡುವುದು ಸೂಕ್ತವೆಂದರು.
ಹಿರೇಗುಂಟನೂರು ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಕೆ.ಎನ್.ಧನರಾಜ್,ರೈತರಾದ ತಿಪ್ಪೇಸ್ವಾಮಿ,ಅಜ್ಜಣ್ಣ, ಈಶ್ವರಪ್ಪ, ಮಂಜು ನಾಥ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net