ಅಂತರ-ಪೀಳಿಗೆಯ ಸಾಮರಸ್ಯಕ್ಕೆ ಅವಿಭಕ್ತ ಕುಟುಂಬ ಮಾದರಿ

oplus_2
oplus_2
Published on

ಚಿತ್ರದುರ್ಗ: ಸಾಮರಸ್ಯದ ಬಾಳಿಗೆ ಅವಿಭಕ್ತ ಕುಟುಂಬ ಮಾದರಿ,ತಂತ್ರಜ್ಞಾನ ಜಗತ್ತನ್ನು ಆವರಿಸುವ ಮೊದಲು ಅವಿಭಕ್ತ ಕುಟುಂಬಗಳ ಸಂಖ್ಯೆ ಸ ಮಾಜದಲ್ಲಿ ಹೆಚ್ಚಾಗಿತ್ತು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ,ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ‌್ಯದರ್ಶಿ ಎಂ. ವಿಜಯ್ ಹೇಳಿದರು.

ಕೇಂದ್ರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಮಂತ್ರಾಲಯ,ರಾಜ್ಯಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ,ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ,ಜಿಪಂ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ನಗರದ ಜಿಲ್ಲಾ ಕ್ರೀಡಾಂ ಗಣ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಅಂತರ-ಪೀಳಿಗೆಯ ಬಾಂಧವ್ಯ ಮೇಳ ಉದ್ಘಾಟಿಸಿ ಅವರು ಮಾತನಾಡಿದರು.

ಅವಿಭಕ್ತ ಕುಟುಂಬಗಳಲ್ಲಿ ಕಿರಿಯರಿಗೆ ಹಿರಿಯರ ಮಾರ್ಗದರ್ಶನ ದೊರಕುತ್ತಿತ್ತು. ಪರಸ್ಪರರು ಪ್ರೀತಿ,ಕರುಣೆ,ವಾತ್ಸಲ್ಯ,ತಾಳ್ಮೆ,ಸಂಯ ಮದಿಂದ ಬಾಳುತ್ತಿದ್ದರು. ಸಂಸ್ಕೃತಿ, ಸಂಪ್ರದಾಯ, ಆರೋಗ್ಯಯುತ ಜೀವನ,ಉತ್ತಮ ಮೌಲ್ಯಗಳು ಬಳುವಳಿಯಾಗಿದ್ದವು. ಪ್ರಸ್ತುತ ಸಮಾಜದಲ್ಲಿ ಮಾನವೀಯ ಮೌಲ್ಯಗಳು ಕ್ಷೀಣಿಸುತ್ತಿವೆ. ತಂತ್ರಜ್ಞಾನದ ಪ್ರಭಾವದಿಂದ ಹಿರಿಯರು ಮತ್ತು ಕಿರಿಯರ ನಡುವೆ ಕಂದಕ ಸೃಷ್ಟಿಯಾಗುತ್ತಿದೆ. ಹಿರಿಯ ಅನುಭವದ ಮಾತುಗಳಿಗೆ ಕಿರಿಯರು ಆಲಿಸಬೇಕು. ಉತ್ತಮ ಮೌಲ್ಯ ಹಾಗೂ ಸಂಸ್ಕಾರಗಳನ್ನು ರೂಢಿಸಿಕೊಳ್ಳಬೇಕು ಎಂದು ವಿಜಯ್ ಹೇಳಿದರು.

ಎಸಿ ಮೆಹಬೂಬ್ ಜಿಲಾನಿ ಖುರೇಷಿ ಮಾತನಾಡಿ,ಮಕ್ಕಳ ಶ್ರೇಯೋಭಿವೃದ್ಧಿಯಲ್ಲಿ ಹಿರಿಯರ ಶ್ರಮ ಶ್ಲಾಘನೀವಾಗಿದೆ. ತಂತ್ರಜ್ಞಾನ ಬದಲಾದ ಹಾಗೆ ಮಾನವೀಯ ಸಂಬಂಧಗಳ ಸ್ವರೂಪವೂ ಬದಲಾಗುತ್ತಿದೆ. ಮನುಷ್ಯ ಸಂಬಂಧಗಳು ಪ್ಲಾಸ್ಟಿಕ್‌ನಂತೆ ಬಳಸಿ ಬೀಸಾಡು ವಂಥ ಮನಸ್ಥಿಗೆ ತಲುಪಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಜಿ.ಪಂ.ಉಪಕಾರ‌್ಯದರ್ಶಿ ಡಾ.ರಂಗಸ್ವಾಮಿ ಮಾತನಾಡಿ,ಹುಟ್ಟಿನಿಂದ ಮುಪ್ಪಿನವರೆಗೂ ನೆಮ್ಮದಿಯಿಂದ ಜೀವನ ನಡೆಸಲು ಸಂವಿಧಾನ ಎಲ್ಲರಿಗೂ ಸಮಾನ ಅವಕಾಶ ನೀಡಿದೆ ಎಂದರು. ಕಾರ್ಯಕ್ರಮದಲ್ಲಿ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಚ್.ಎಸ್.ಮಹೇಶ್ವರಪ್ಪ, ರಾಜ್ಯಸರ್ಕಾರಿ ನಿವೃತ್ತ ನೌಕರರ ಜಿಲ್ಲಾ ಸಂಘದ ಅಧ್ಯಕ್ಷ ಪ್ರೇಮನಾಥ್ ಮಾತನಾಡಿದರು.

ಪಾಲಕರ ಪೋಷಣೆ,ಸಂರಕ್ಷಣೆ ಹಾಗೂ ಹಿರಿಯ ನಾಗರೀಕರ ರಕ್ಷಣಾ ಕಾಯ್ದೆ-2007 ಕುರಿತು ಕಾನೂನು ನೆರವು ಅಭಿರಕ್ಷ ಎಂ.ಮೂರ್ತಿ,ನಮ್ಮ ಹಿರಿಯರು ನಮ್ಮ ಆದರ್ಶ ವಿಷಯದ ಕುರಿತು ನಿವೃತ್ತ ಉಪನ್ಯಾಸಕಿ ಸಿ.ಬಿ.ಶೈಲಾ ಜಯಕುಮಾರ್ ಉಪನ್ಯಾಸ ನೀಡಿದರು.

ಇದೇ ಸಂದರ್ಭದಲ್ಲಿ ಜಿಲ್ಲಾ ವ್ಯಾಪ್ತಿಯಲ್ಲಿ ಕಲೆ,ಸಾಹಿತ್ಯ,ಕ್ರೀಡೆ,ರಂಗಭೂಮಿ ಹಾಗೂ ಸಮಾಜ ಸೇವೆ ಸೇರಿದಂತೆ ವಿವಿಧ ಕ್ಷೇತ್ರಗಳ ಲ್ಲಿ ಸಾಧನೆಗೈದ ಹಿರಿಯ ನಾಗರಿಕರಾದ ಡಿ.ನಾಗಭೂಷಣ್,ಜಿ.ಎಸ್.ಉಜ್ಜಿನಪ್ಪ,ಪಿ.ತಿಪ್ಪೇಸ್ವಾಮಿ,ಡಾ.ಬಿ.ರಾಜಶೇಖರ್,ರಮಾದೇವಿ ವೆಂಕ ಣ್ಣಾಚಾರ್,ಪ್ರೊ.ಎಚ್.ಲಿಂಗಪ್ಪ,ಎನ್.ವೆಂಕಟಸ್ವಾಮಿ,ಡಾ.ಪಿ.ಯಶೋಧ ರಾಜಶೇಖರಪ್ಪ, ಗಾಯತ್ರಿ ಶಿವರಾಂ ಅವರನ್ನು ಸನ್ಮಾನಿಸಲಾ ಯಿತು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಜಿಲ್ಲಾ ನಿರೂಪಣಾಧಿಕಾರಿ ಡಿ.ಮಂಜುನಾಥ್,ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಜೆ. ವೈಶಾಲಿ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net