

ಕಲಬುರಗಿ: ನಗರ ಸೇರಿ ಜಿಲ್ಲಾದ್ಯಂತ ಎಲ್ಲೆಡೆ ವಿಶೇಷ ಪೂಜೆ, ಅಲಂಕಾರ, ಅಭಿಷೇಕ, ರಥೋತ್ಸವ, ಭವ್ಯ ಶೋಭಾಯಾತ್ರೆಯ ಸಂಭ್ರಮದೊಂದಿಗೆ ಭಕ್ತಿ ಶ್ರದ್ಧೆಯಿಂದ ಶನಿವಾರ ಹನುಮ ಜಯಂತಿಯನ್ನು ಆಚರಿಸಲಾಯಿತು.
ಬೆಳಗ್ಗೆಯಿಂದಲೇ ಅಭಿಷೇಕ, ಹೋಮ, ಹವನ, ಪಂಚಾಮೃತ ಅಭಿಷೇಕ, ತೊಟ್ಟಿಲೋತ್ಸವ, ಕುಂಕುಮರ‍್ಚನೆ, ಪವಮಾನ ಹೋಮ ಸೇರಿ ವಿವಿಧ ಪೂಜಾ ಕೈಂರ‍್ಯಗಳನ್ನು ನೆರವೇರಿಸಲಾಯಿತು. ಸಂಜೆಗೆ ವಿವಿಧ ದೇವಸ್ಥಾನಗಳಲ್ಲಿ ಸಹಸ್ರಾರು ಭಕ್ತರ ಜೈೂಷಣೆಗಳ ಮಧ್ಯೆ ಅದ್ದೂರಿ ರಥೋತ್ಸವಗಳು ನೆರವೇರಿದವು.
ನಗರದ ಕೋರಂಟಿ, ನವಲದಿ ಹನುಮಾನ, ಬ್ರಹ್ಮಪುರ, ವಿದ್ಯಾನಗರ, ಗಂಗಾನಗರ, ಪ್ರಶಾಂತ ನಗರ, ಸೌಂದರ ನಗರ, ಕರುಣೇಶ್ವರ ನಗರ, ಶಹಾಬಜಾರ್, ಎನ್ಜಿಒ ಕಾಲನಿ, ಸಂತೋಷ ಕಾಲನಿ, ವಿಠಲ್ ನಗರ, ಸ್ಮಶಾನ ಹನುಮಾನ, ವೆಂಕಟೇಶ ನಗರ, ಮುದ್ದಿ ಹನುಮ ಮಂದಿರ, ಸಿದ್ಧಿ ಮಾರುತಿ, ಜಾಗೃತ ಹನುಮಾನ ಸೇರಿ ನಗರದ ಎಲ್ಲ ಹನುಮಾನ ದೇವಸ್ಥಾನಗಳಲ್ಲಿ ಬೆಳಗ್ಗೆಯಿಂದಲೇ ಪೂಜಾ ಕೈಂರ‍್ಯಗಳನ್ನು ನೆರವೇರಿಸಿ, ಭಕ್ತರು ಸರತಿ ಸಾಲಿನಲ್ಲಿ ರ‍್ಶನ ಪಡೆದರು. ಎಲ್ಲ ಮಂದಿರಗಳಲ್ಲಿ ಬೆಳಗ್ಗೆಯಿಂದಲೇ ಭಕ್ತರಿಗೆ ಪ್ರಸಾದ, ಪಾನಕ ವ್ಯವಸ್ಥೆ ಮಾಡಲಾಯಿತು. ಗಂಗಾನಗರ ಹನುಮಾನ ದೇವಸ್ಥಾನದಲ್ಲಿ ಸಹಸ್ರಾರು ಭಕ್ತರ ಜೈಘೋಷಣೆಗಳ ಮಧ್ಯೆ ಅದ್ದೂರಿ ರಥೋತ್ಸವ ನೆರವೇರಿತು.