ಅಂಚೆ ಸೇವಕರಿಗೆ ಆರ್ಥಿಕ ಭದ್ರತೆ ಅವಶ್ಯ

19 Thyagarthi file 2
ತ್ಯಾಗರ್ತಿ ಅಂಚೆ ಕಚೇರಿಯಲ್ಲಿ ನಿವೃತ್ತರಾದ ಅಂಚೆ ಸೇವಕ ಕುಮಾರಣ್ಣ ಅವರನ್ನು ಅಂಚೆ ಇಲಾಖೆ ಮತ್ತು ಜಿಲ್ಲಾ ಗ್ರಾಮೀಣ ಅಂಚೆ ನೌಕರರ ಸಂಘದಿಂದ ಸನ್ಮಾನಿಸಲಾಯಿತು. ವೆಂಕಟೇಶ್ ಒಡ್ಡಿನಬೈಲು, ಮಂಜಪ್ಪ, ಸುಬ್ರಹ್ಮಣ್ಯ ಕಾರ್ಗಲ್, ರಾಘವೇಂದ್ರ, ಪ್ರಭಾ ಇತರರಿದ್ದರು.
Published on

ತ್ಯಾಗರ್ತಿ: ಗ್ರಾಮೀಣ ಅಂಚೆ ಸೇವಕರಿಗೆ ನಿವೃತ್ತಿ ಸಂದರ್ಭದಲ್ಲಾದರೂ ಜೀವನ ಭದ್ರತೆಗಾಗಿ ಆರ್ಥಿಕ ಸೌಲಭ್ಯ ಕಲ್ಪಿಸಬೇಕು ಎಂದು ಗ್ರಾಮೀಣ ಅಂಚೆ ನೌಕರರ ಸಂಘದ ಜಿಲ್ಲಾಧ್ಯಕ್ಷ ವೆಂಕಟೇಶ್ ಒಡ್ಡಿನಬೈಲು ಹೇಳಿದರು.

ತ್ಯಾಗರ್ತಿ ಅಂಚೆ ಕಚೇರಿಯಲ್ಲಿ ಶನಿವಾರ ನಿವೃತ್ತ ಅಂಚೆಸೇವಕ ಕುಮಾರಣ್ಣ ಅವರಿಗೆ ಏರ್ಪಡಿಸಿದ್ದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಅಂಚೆ ಇಲಾಖೆಯಲ್ಲಿ ಕುಮಾರಣ್ಣ ಅಪರೂಪದ ವ್ಯಕ್ತಿ. ಅವರು 43 ವರ್ಷ ಪ್ರಾಮಾಣಿಕ ಸೇವೆ ಸಲ್ಲಿಸಿದ್ದಾರೆ. ಊರಿನ ಎಲ್ಲರಿಗೂ ಚಿರಪರಿಚಿತರಾಗಿ ಯಾವುದೇ ಕಳಂಕ ಇಲ್ಲದಂತೆ ನಿವೃತ್ತರಾಗಿದ್ದಾರೆ. ಕೇಂದ್ರ ಸರ್ಕಾರದ ಇಲಾಖೆಗಳಲ್ಲಿ ಇಂತಹ ನಿಸ್ವಾರ್ಥ ಸೇವೆ ಸಲ್ಲಿಸಿದ ವ್ಯಕ್ತಿ ಇಂದು ಬರಿ ಕೈಯಲ್ಲಿ ಮನೆಗೆ ಹೋಗುವಂತಾಗಿದೆ. ಇದು ನಮಗೆ ತುಂಬ ನೋವುಂಟುಮಾಡಿದೆ. ಸರ್ಕಾರ ನಿವೃತ್ತ ಅಂಚೆ ಸೇವಕರ ಕುಟುಂಬ ಮತ್ತು ಮಕ್ಕಳ ಭವಿಷ್ಯದ ಬಗ್ಗೆ ಚಿಂತನೆ ಮಾಡಬೇಕು. ಇದಕ್ಕಾಗಿ ಮುಂದಿನ ದಿನಗಳಲ್ಲಿ ಸಂಘಟಿತರಾಗಿ ಹೋರಾಟ ಮಾಡಬೇಕು. ಯುವಕರು ಸಂಘದ ಚಟುವಟಿಕೆಗಳಲ್ಲಿ ಭಾಗವಹಿಸಬೇಕು ಎಂದು ಹೇಳಿದರು.

ಅಭಿನಂದನೆ ಸ್ವೀಕರಿಸಿ ಮಾತನಾಡಿದ ನಿವೃತ್ತ ಅಂಚೆ ಸೇವಕ ಕುಮಾರಣ್ಣ, ನಮ್ಮ ಕೆಲಸದಲ್ಲಿ ಇಲಾಖೆ ಹಾಗೂ ಜನರಿಗೆ ಯಾವುದೇ ದ್ರೋಹ ಮಾಡಬಾರದು. ಜನರಿಗೆ ಉತ್ತಮ ಸೇವೆ ನೀಡಿದರೆ ನಮಗೆ ಒಳಿತಾಗುತ್ತದೆ. ಪ್ರಾಮಾಣಿಕ ಸೇವೆ ಮಾಡಿದರೆ ಜನರೇ ನಮ್ಮ ಕೈಹಿಡಿಯುತ್ತಾರೆ ಎಂದರು.

ಅಂಚೆ ಮೇಲ್ವಿಚಾರಕಿ ಪ್ರಭಾ, ಜಿಲ್ಲಾ ಗ್ರಾಮೀಣ ಅಂಚೆ ನೌಕರರ ಸಂಘದ ಪ್ರಮುಖರಾದ ಕೆ.ಎಲ್.ಮಂಜಪ್ಪ, ಸುಬ್ರಹ್ಮಣ್ಯ ಕಾರ್ಗಲ್, ರಾಘವೇಂದ್ರ, ಅಶೋಕ್, ಸೌಭಾಗ್ಯ, ಭವ್ಯಾ, ಚೇತನ್, ಸೃಷ್ಟಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net