

ಹಾಸನ: ಕ್ಷೇತ್ರದಲ್ಲಿ ಚಲಾವಣೆಯಾದ 9,362 ಮತಗಳಲ್ಲಿ 2,368 ಮತಗಳು ತಿರಸ್ಕೃತಗೊಂಡಿವೆ. ಪುರಸ್ಕೃತ 6,994 ಮತಗಳಲ್ಲಿ ಪ್ರಜ್ವಲ್ ರೇವಣ್ಣ ಅವರಿಗೆ ಪ್ರಜ್ವಲ್ ರೇವಣ್ಣ 3,803 ಮತಗಗಳು ಬಂದಿದ್ದು, ಕಾಂಗ್ರೆಸ್ ಅಭ್ಯರ್ಥಿಗಿಂತ 1,089 ಮತಗಳ ಮುನ್ನಡೆ ಸಾಧಿಸಿದರು. ಶ್ರೇಯಸ್ ಪಟೇಲ್ 2,714 ಮತಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಅದೇ ರೀತಿ ಗಂಗಾಧರ್ ಬಹುಜನ್-105, ಎಂ.ವೈ.ದೇವರಾಜು-24, ಹೆಚ್.ಕೆ.ನಿಂಗರಾಜು-20, ಕೆ.ಎ.ಪ್ರತಾಪ್-37, ಹೆಚ್.ಡಿ.ರೇವಣ್ಣ 16, ಬಿ.ಶಿವರಾಜು-05, ಕೆ.ಆರ್.ಗಂಗಾಧರಪ್ಪ-8, ನಿವೃತ್ತ ಸೈನಿಕ ಬಸವರಾಜು -80, ಆರ್.ಜಿ.ಸತೀಶ್-46, ಸಿದ್ದಭೋಮಿ-47, ಬಿ.ಎನ್.ಸುರೇಶ್-9, ಬಿ.ಎನ್.ಸಂತೋಷ್ 5, ಹೇಮಾಂತ್-4, ನೋಟಾ-71 ಮತಗಳು ಚಲಾವಣೆಯಾಗಿವೆ
ಕಾಂಗ್ರೆಸ್‌ನಲ್ಲಿ ಸಂಭ್ರಮವೋ ಸಂಭ್ರಮ:
ಕಳೆದ ಎರಡುವರೆ ದಶಕಗಳಿಂದ ಲೋಕಸಭಾ ಸ್ಥಾನವನ್ನ ಪಡೆದುಕೊಳ್ಳಲಾಗದೆ ಕಾಂಗ್ರಸ್ ತೀವ್ರ ಸಂಕಷ್ಟದಲ್ಲಿತ್ತು. ಈಗ ಮತ್ತೆ ಇತಿಹಾಸ ಸೃಷ್ಠಿಸಿರುವ ಶೇಯಸ್‌ಪಟೇಲ್ ಅವರು ಜಯಭೇರಿ ಬಾರಿಸುತಿದ್ದಂತೆ ಜಿಲ್ಲೆಯಲ್ಲಿ ಕೈ ಕಾರ್ಯಕರ್ತರು ಮತ್ತು ಮುಖಂಡರಲ್ಲಿ ಸಂಭ್ರಮ ಮನೆ ಮಾಡಿದೆ. ಶೇಯಸ್ ಪಟೇಲ್ ಅವರು ಗೆಲುವು ಸಾಧಿಸುತ್ತಿದ್ದಂತೆ ಕಾರ್ಯಕರ್ತರು ಮತ್ತು ಮುಖಂಡರು ನಗರ ಮತ್ತು ಜಿಲ್ಲೆಯಾದ್ಯಂತ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರಲ್ಲದೆ ಬಣ್ಣ ಎರಚಿಕೊಂಡು ಕುಣಿದು ಕುಪ್ಪಳಿಸಿದರು.