

ಕೆಂಭಾವಿ: ಪಟ್ಟಣದ ಅಂಚೆ ಕಚೇರಿಯಲ್ಲಿ ಅಧಿಕಾರಿಗಳ ಮತ್ತು ಸಿಬ್ಬಂದಿ ಕೊರತೆಯಿಂದ ಜನತೆಗೆ ತೀವ್ರ ತೊಂದರೆಯಾಗಿದೆ. ಮಂಗಳವಾರ ಮಧ್ಯಾಹ್ನ ೧ ಗಂಟೆಯಾದರೂ ಅಂಚೆ ಕಚೇರಿಗೆ ಪೋಸ್ಟ್ ಮಾಸ್ಟರ್ ಬಾರದ ಕಾರಣ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸಿದರು.
ಕಚೇರಿಯಲ್ಲಿ ಕೇವಲ ಗ್ರಾಮೀಣ ಭಾಗದ ಅಂಚೆ ಸೇವಕರು ಮಾತ್ರ ಇದ್ದು, ಉಳಿದ ಅಧಿಕಾರಿಗಳು ಸಹಾಯಕರು ಇಲ್ಲದೆ ತಮ್ಮ ಹಲವು ಕೆಲಸಗಳಿಗೆ ಬಂದ ಜನತೆ ಅಧಿಕಾರಿಗಳಿಗೆ ಹಿಡಿಶಾಪ ಹಾಕಿದರು.
ಮುಖ್ಯವಾಗಿ ವೃದ್ಧಾಪ್ಯ ಪಿಂಚಣಿ, ಆಧಾರ್ ಕಾರ್ಡ್ ನವೀಕರಣ, ಖಾತೆ ವ್ಯವಹಾರ ಸೇರಿ ಹಲವು ಕೆಲಸ ಕಾರ್ಯ ದಿನನಿತ್ಯ ಈ ಅಂಚೆ ಕಚೇರಿಯಲ್ಲಿ ನಡೆಯುತ್ತವೆ. ಆದರೆ ಮಂಗಳವಾರ ಮಧ್ಯಾಹ್ನವಾದರೂ ಬಾರದ ಅಧಿಕಾರಿಗಳ ಮತ್ತು ಸಿಬ್ಬಂದಿಯಿAದ ಜನತೆ ಬೇಸತ್ತು ಕಚೇರಿ ಕಿಟಕಿ ಬಳಿ ಕಾಯುವಂತಾಯಿತು. ಈ ಬಗ್ಗೆ ಯಾದಗಿರಿ ಅಂಚೆ ಇಲಾಖೆ ಎಸ್‌ಪಿಒ ಬಿ. ನಾರಾಯಣ ಅವರನ್ನು ವಿಚಾರಿಸಿದಾಗ ನಮ್ಮ ಇಲಾಖೆಯಲ್ಲಿ ಸಹಾಯಕರು ಮತ್ತು ಪೋಸ್ಟ್ ಮಾಸ್ಟರ್‌ಗಳ ಕೊರತೆ ಇದ್ದು, ಇದರಿಂದ ಕೆಲವು ಅಂಚೆ ಕಚೇರಿಯಲ್ಲಿ ತೊಂದರೆ ಉಂಟಾಗುತ್ತಿದೆ. ಈ ಬಗ್ಗೆ ನಾವು ಮೆಲಧಿಕಾರಿಗಳಿಗೆ ಎಷ್ಟು ಪತ್ರ ಬರೆದರೂ ಈ ಸಮಸ್ಯೆ ಬಗೆಹರಿಯದಾಗಿದ್ದು ನಾವು ನಿಸ್ಸಾಹಯಕರಾಗಿz್ದೆÃವೆ ಎಂದು ತಮ್ಮ ಅಳಲು ತೋಡಿಕೊಂಡರು.