ಅಂಚೆ ಉಳಿತಾಯ ಖಾತೆದಾರರಿಗೆ ವಂಚನೆ

31blrp4
ಬೇಲೂರು ತಾಲೂಕಿನ ಗೆಂಡೇಹಳ್ಳಿ ಅಂಚೆ ಕಚೇರಿಯಲ್ಲಿ ಖಾತೆದಾರರ ಹಣ ದುರೂಪಯೋಗ ಪಡಿಸಿಕೊಂಡಿರುವ ಅಂಚೆ ಪಾಲಕಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಯಿತು.
Published on

ಬೇಲೂರು: ಅಂಚೆ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತದ್ದ ಅಂಚೆ ಪಾಲಕಿಯೊಬ್ಬರು ಉಳಿತಾಯ ಖಾತೆದಾರರಿಗೆ ವಂಚಿಸಿ, ಹಣ ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿ ಸಾರ್ವಜನಿಕರು ಗುರುವಾರ ತಾಲೂಕಿನ ಗೆಂಡೇಹಳ್ಳಿ ಶಾಖಾ ಅಂಚೆ ಕಚೇರಿ ಮುಂದೆ ಪ್ರತಿಭಟಿಸಿದರು.

ಗೆಂಡೇಹಳ್ಳಿ ಅಂಚೆ ಕಚೇರಿಯಲ್ಲಿ ಖಾತೆ ತೆರೆದು ಮುಂದಿನ ಜೀವನಕ್ಕಾಗಿ ಹಣವನ್ನು ಇಟ್ಟಿದ್ದೆವು. ಆದರೆ ಇಲ್ಲಿನ ಅಂಚೆ ಪಾಲಕಿ ನಮ್ಮ ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ನಮ್ಮ ಹಣ ವಾಪಸ್ ಕೊಡಬೇಕು, ಅಂಚೆ ಪಾಲಕಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.
ಉಳಿತಾಯ ಖಾತೆದಾರ ಬಾಣಸವಳ್ಳಿ ಕಲ್ಲೇಶ್ ಮಾತನಾಡಿ, ಅಂಚೆ ಪಾಲಕಿ ಸಾಕಷ್ಟು ಖಾತೆದಾರರಿಗೆ ಪಾಸ್‌ಬುಕ್ ಕೊಟ್ಟಿಲ್ಲ. ಕೇಳಿದರೆ ಬೇಲೂರು ಕಚೇರಿಯಲ್ಲಿದೆ ಎಂದು ಇಲ್ಲದ ಸಾಬೂಬು ಹೇಳಿ ಕಳುಹಿಸುತ್ತಿದ್ದರು. ಜತೆಗೆ ವೃದ್ಧಾಪ್ಯ ವೇತನದಾರರ ಹಣವನ್ನೂಲಪಟಾಯಿಸಿದ್ದಾರೆ ಎಂದು ದೂರಿದರು.
ಗೆಂಡೇಹಳ್ಳಿ ಗ್ರಾಮದ ಪ್ರಸನ್ನ, ನಸ್ರಿಮಾ, ಶಿವಕುಮಾರ್, ಖಾತೆದಾರರಾದ ವಿನಯ್, ರಾಖೇಶ್, ಅನ್ವರ್ ಪಾಷಾ, ಇಪ್ರೊಜ್, ಯಶ್ಮಿನ್‌ಭಾನು, ಸಮೀನಾ ಭಾನು, ತಾಸೀನಾ, ಮಂಜುನಾಥ್, ತನ್ವರ್ ಖಾನ್, ಸದೀಯಾ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net