ಅಂಚೆ ಇಲಾಖೆ ನೌಕರರ ಸಹಕಾರ ಸಂಘಕ್ಕೆ ೮.೮೧ ಲಕ್ಷ ರೂ. ನಿವ್ವಳ ಲಾಭ

9 ckm 2
ಚಿಕ್ಕಮಗಳೂರಿನ ಶಾರದಾ ಪೈ ಸಮುದಾಯ ಭವನದಲ್ಲಿ ಚಿಕ್ಕಮಗಳೂರು ಅಂಚೆ ಇಲಾಖೆ ನೌಕರರ ಪತ್ತಿನ ಸಹಕಾರ ಸಂಘದ ೨೦೨೪-೨೫ನೇ ಸಾಲಿನ ವಾರ್ಷಿಕ ಸಭೆಯನ್ನು ಸಂಘದ ಅಧ್ಯಕ್ಷ ಸಿ.ಭಾಸ್ಕರ್ ಉದ್ಘಾಟಿಸಿದರು. ಮಂಜಪ್ಪ, ಎಚ್.ಟಿ.ಮಂಜಪ್ಪ, ಶ್ರೀನಿವಾಸ ಮತ್ತಿತರರಿದ್ದರು.
Published on

ಚಿಕ್ಕಮಗಳೂರು: ಅಂಚೆ ಇಲಾಖೆ ನೌಕರರ ಪತ್ತಿನ ಸಹಕಾರ ಸಂಘವು ಪ್ರಸಕ್ತ ಸಾಲಿನಲ್ಲಿ ೮.೮೧ ಲಕ್ಷ ರೂ. ನಿವ್ವಳ ಲಾಭ ಗಳಿಸುವ ಮೂಲಕ ಆರ್ಥಿಕವಾಗಿ ಸದೃಢವಾಗಿದೆ ಎಂದು ಸಂಘದ ಅಧ್ಯಕ್ಷ ಸಿ.ಭಾಸ್ಕರ್ ತಿಳಿಸಿದರು.

ನಗರದ ಶಾರದಾ ಪೈ ಸಮುದಾಯ ಭವನದಲ್ಲಿ ಚಿಕ್ಕಮಗಳೂರು ಅಂಚೆ ಇಲಾಖೆ ನೌಕರರ ಪತ್ತಿನ ಸಹಕಾರ ಸಂಘದ ೨೦೨೪-೨೫ನೇ ಸಾಲಿನ ವಾರ್ಷಿಕ ಸಭೆ ಉದ್ಘಾಟಿಸಿ ಮಾತನಾಡಿದರು.

ಸಂಘವು ೨೦೦೦ನೇ ಇಸವಿಯಲ್ಲಿ ಸ್ಥಾಪನೆಗೊಂಡಿದ್ದು, ಸಂಘದ ಅಭಿವೃದ್ಧಿ ಹಾಗೂ ಇಲಾಖಾ ಸಿಬ್ಬಂದಿ ವರ್ಗಕ್ಕೆ ಉತ್ತಮ ಸೇವೆ, ಹಣಕಾಸು ಸೌಲಭ್ಯವನ್ನು ಕೊಡುವ ಗುರಿ ಹೊಂದುವ ಮೂಲಕ ಸರ್ವತೋಮುಖ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸುತ್ತಿದೆ ಎಂದರು.

ಆಡಳಿತ ಮಂಡಳಿ ಸಂಘದ ವಾರ್ಷಿಕ ಮಹಾಸಭೆಯ ಪ್ರತಿವರ್ಷವು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದೆ. ಮುಂದಿನ ಮಹಾಸಭೆಯು ಸಂಘಕ್ಕೆ ನೂತನ ಕಟ್ಟಡ ನಿರ್ಮಿಸಿ ಅಲ್ಲಿಯೇ ನಡೆಸಲಾಗುವುದು ಎಂದು ಭರವಸೆ ನೀಡಿದ ಅವರು ಸದಸ್ಯರುಗಳ ಸಹಕಾರವು ಬಹಳಷ್ಟು ಅವಶ್ಯಕವಾಗಿದೆ ಎಂದು ತಿಳಿಸಿದರು.

ಇದೇ ವೇಳೆ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಅತಿಹೆಚ್ಚು ಅಂಕಗಳಿಸಿದ ಸದಸ್ಯರುಗಳ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರಾದ ಮಂಜಪ್ಪ, ಎಚ್.ಟಿ.ಮಂಜಪ್ಪ, ಎಸ್.ಡಿ.ಮಂಜಪ್ಪ, ಶ್ರೀನಿವಾಸ್, ಪ್ರಸನ್ನಕುಮರ್, ಸುಬ್ರಹ್ಮಣ್ಯ, ಸಚಿನ್‌ಕುಮಾರ್, ಘನಲಿಂಗಮೂರ್ತಿ, ಶಶಿಕುಮಾರ್, ಎಂ.ಸುಧಾ, ರೋವಿನಿ ಮೇರಿ ಅನಿತಾ, ಸೌರಭ್, ಬಸವರಾಜ್, ಕಾರ್ಯದರ್ಶಿ ಮಧು ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net