ಅಂಗಾಂಗ ದಾನದ ಅರಿವು ಅಗತ್ಯ

3manju10
ಬೆಳಗಾವಿ ನಗರದ ಕೆಎಲ್​ಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕಿಯ ಸಂಶೋಧನಾ ಕೇಂದ್ರದಲ್ಲಿ ಗುರುವಾರ ರಾಷ್ಟ್ರೀಯ ಅಂಗಾಂಗ ದಾನ ದಿನ ಕಾರ್ಯಕ್ರಮವನ್ನು ಪೊಲೀಸ್​ ಆಯುಕ್ತ ಎಸ್​.ಎನ್​.ಸಿದ್ದರಾಮಪ್ಪ ಉದ್ಘಾಟಿಸಿದರು. ಕರ್ನಲ್​ ಡಾ.ಎಂ ದಯಾನಂದ, ಡಾ.ರಾಜೇಶ ಪವಾರ, ಡಾ.ವಿಶ್ವನಾಥ ಪಟ್ಟಣಶೆಟ್ಟಿ, ಡಾ.ಬಸವರಾಜ ಬಿಜ್ಜರಗಿ ಇತರರಿದ್ದರು.
Published on

ಬೆಳಗಾವಿ: ಗ್ರಾಮೀಣ ಪ್ರದೇಶದಲ್ಲಿ ಅಂಗಾಂಗ ದಾನ ಕುರಿತು ಅರಿವು ಕಡಿಮೆ ಇದ್ದು, ಆ ಭಾಗದಲ್ಲಿ ಅಂಗ ಪಡೆಯುವ ಸರಿಯಾದ ಪಡೆಯುವ ವ್ಯವಸ್ಥೆ ಇಲ್ಲದ್ದರಿಂದ ನಿಗದಿತ ಪ್ರಮಾಣದಲ್ಲಿ ಅಂಗ ಕಸಿ ನೆರವೇರದೆ ತೊಂದರೆ ಅನುಭವಿಸುವಂತಾಗಿದೆ ಎಂದು ಮಹಾನಗರ ಪೊಲೀಸ್​ ಆಯುಕ್ತ ಎಸ್.ಎನ್​.ಸಿದ್ದರಾಮಪ್ಪ ಹೇಳಿದರು.

ನಗರದ ಕೆಎಲ್​ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕಿಯ ಸಂಶೋಧನಾ ಕೇಂದ್ರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಅಂಗಾಂಗ ದಾನ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, 1999&2000 ಸಾಲಿನಲ್ಲಿ ರಾಜ್ಯದಲ್ಲಿ ಅಂಗಾಂಗ ಕುರಿತು ಕಾನೂನುಬಾಹಿರ ಚಟುವಟಿಕೆಗಳು ಕಂಡುಬಂದಾಗ ರಾಜ್ಯ ಸರ್ಕಾರವು ಒಂದು ಸ್ಪಷ್ಟ ರೂಪ ನೀಡಿ ಕಾನೂನು ಜಾರಿಗೆ ತಂದಿದೆ. ಅಂಗಾಂಗ ದಾನ ಚಳವಳಿಗೆ ಅನೇಕರು ಸಹಾಯ ಹಾಗೂ ಕೊಡುಗೆ ನೀಡುತ್ತಿದ್ದಾರೆ. ಇದು ಇನ್ನಷ್ಟು ತೀವ್ರಗೊಳ್ಳಬೇಕು ಗ್ರಾಮೀಣ ಪ್ರದೇಶದ ಜನರಿಗೆ ಅರಿವು ಮೂಡಿಸುವ ಕಾರ್ಯ ನಡೆಯಬೇಕು ಎಂದರು.

ಆಸ್ಪತ್ರೆ ವೈದ್ಯಕಿಯ ನಿರ್ದೇಶಕ ಕರ್ನಲ್​ ಡಾ.ಎಂ.ದಯಾನಂದ ಮಾತನಾಡಿ, ರಾಜ್ಯದಲ್ಲಿ ಅನೇಕ ವೈದ್ಯಕಿಯ ಮಹಾವಿದ್ಯಾಲಯಗಳು ಇದ್ದರೂ ಕೂಡ ಅಂಗಾಂಗ ಕಸಿಯಲ್ಲಿ ನಿರೀಸಿದಷ್ಟು ಸಾಧ್ಯವಾಗುತ್ತಿಲ್ಲ. ಇದು ಸಾಮಾಜಿಕ ಚಳವಳಿಯಾಗಿ ರೂಪುಗೊಳ್ಳಬೇಕು ಎಂದರು.
ಆಸ್ಪತ್ರೆ ಕ್ಲಿನಿಕಲ್​ ನಿರ್ದೇಶಕ ಡಾ.ಆರ್​.ಬಿ.ನೇರ್ಲಿ ಮಾತನಾಡಿ, ಅಂಗಾಂಗ ದಾನ ಭಾರತೀಯ ಸಂಸತಿ. ಪ್ರಥಮ ಬಾರಿಗೆ ಅಂಗಾಂಗಗಳ ದಾನ ಮಾಡಿದ್ದು ಮತ್ತು ಜೋಡಿಸಿದ್ದು ಭಾರತದಲ್ಲಿ. ಅದು ಪುರಾಣ ಗ್ರಂಥದಲ್ಲಿದ್ದರೂ ಕೂಡ ಪೂಜ್ಯನಿಯ ಭಾವದಿಂದ ಆರಾಧಿಸುತ್ತಾರೆ ಎಂದು ತಿಳಿಸಿದರು.

ಜೆಎನ್​ ವೈದ್ಯಕಿಯ ಮಹಾವಿದ್ಯಾಲಯದ ಉಪಪಾಚಾರ್ಯ ಡಾ.ರಾಜೇಶ ಪವಾರ, ಡಾ.ವಿಶ್ವನಾಥ ಪಟ್ಟಣಶೆಟ್ಟಿ, ಡಾ.ಬಸವರಾಜ ಬಿಜ್ಜರಗಿ, ಡಾ.ರಾಜಶೇಖರ ಸೋಮನಟ್ಟಿ, ನ್ಯಾಯಾಧೀಶೆ ನಯನಾ ನೇರ್ಲಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net