

ಬೆಳಗಾವಿ : ನಗರದ ರೋಟರಿ ಕ್ಲಬ್ ಆಫ್ ವೇಣುಗ್ರಾಮ ಬೆಳಗಾವಿ ವತಿಯಿಂದ ಜಯಭಾರತ್ ಫೌಂಡೇಷನ್ ಪ್ರಾಯೋಜಕತ್ವದಲ್ಲಿ ರೋಟರಿ 12ನೇ ಆವೃತ್ತಿಯ ‘ಬೆಳಗಾವಿ ಹಾಫ್ ಮ್ಯಾರಥಾನ್ ಫೆ.26ರಂದು ಆಯೋಜಿಸಲಾಗಿದೆ ಎಂದು ರೋಟರಿ ಕ್ಲಬ್ ಅಧ್ಯಕ್ಷ ಉಮೇಶ ರಾಮಗುರವಾಡಿ ಹೇಳಿದರು.
ನಗರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2008ರಲ್ಲಿ ಮೊದಲ ಆವೃತ್ತಿ ಮ್ಯಾರಥಾನ್ ನಡೆದಿತ್ತು. ಇದೀಗ 12ನೇ ಆವೃತ್ತಿಯನ್ನು ‘ಅಂಗಾಂಗ ದಾನ ಜಾಗೃತಿಗಾಗಿ ನಡೆಸಲಾಗುತ್ತಿದ್ದು, ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದರು.
ಮ್ಯಾರಥಾನ್‌ನಲ್ಲಿ ಮೋಹನ್ ಫೌಂಡೇಷನ್ ವತಿಯಿಂದ ಅಂಗದಾನದ ಕುರಿತು ಜಾಗೃತಿ ಅಭಿಯಾನ ನಡೆಯಲಿದ್ದು, ಬಿಪಿಸಿಎಲ್ ಓಟದ ಸಹ ಪ್ರಾಯೋಜಕ್ವತ ನೀಡಿದೆ. ದೇಶದ ವಿವಿಧ ಜಿಲ್ಲೆಗಳಿಂದ ಸುಮಾರು 2,000-3,000 ಓಟಗಾರರು ಭಾಗವಹಿಸುವ ನಿರೀಕ್ಷೆಯಿದೆ ಎಂದು ತಿಳಿಸಿದರು.
ಮ್ಯಾರಾಥಾನ್‌ನಲ್ಲಿ ಎಲೈಟ್ ರನ್ನರ್ಸ್, ಐರನ್‌ಮ್ಯಾನ್ ಫಿನಿಶರ್ಸ್ ಮತ್ತು ಭಾರತದ ವಿವಿಧ ರಾಜ್ಯಗಳ ಪ್ರಸಿದ್ಧ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. ಮ್ಯಾರಥಾನ್‌ನಲ್ಲಿ ನಾಲ್ಕು ವಿಭಾಗಗಳ ಓಟಗಳಿದ್ದು, ಹಾಫ್ ಮ್ಯಾರಥಾನ್(21.095 ಕಿಮೀ), 10 ಕಿಮೀ, 5 ಕಿಮೀ ಮತ್ತು 3 ಕಿ.ಮೀ ಫನ್ ರನ್/ವಾಕ್ ಇದೆ. 21 ಕಿ.ಮೀ, 10 ಕಿ.ಮೀ ಮತ್ತು 5 ಕಿ.ಮೀ ಓಟಗಳಲ್ಲಿ 34 ವರ್ಷಗಳು, 35-49 ವರ್ಷಗಳು, 50 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ವಿಭಾಗಗಳಲ್ಲಿ ವಿಜೇತರಿಗೆ ಅತ್ಯಾಕರ್ಷಕ ನಗದು ಬಹುಮಾನ ನೀಡಲಾಗುವುದು. 17 ವರ್ಷದೊಳಗಿನವರು 5.ಕಿಮೀಗಳ ಪ್ರತ್ಯೇಕ ವಿಭಾಗದಲ್ಲಿ ಪಾಲ್ಗೊಳ್ಳಬಹುದು. ನಗರದ ಸಿಪಿಎಡ್ ಮೈದಾನದಿಂದ ಬೆಳಗ್ಗೆ 5 ಗಂಟೆಗೆ ಮ್ಯಾರಥಾನ್‌ಗೆ ಚಾಲನೆ ಲಭಿಸಲಿದೆ. ಮಾಹಿತಿಗಾಗಿ ಮೊಬೈಲ್ ಸಂಖ್ಯೆ. 8283875150, 9341110039, 9845209848, 8152894353 ಸಂಪರ್ಕಿಸಬಹುದು ಎಂದರು.
ಸುದ್ದಿಗೋಷ್ಠಿಯಲ್ಲಿ ಇವೆಂಟ್ ಮೆಂಟರ್ ಮಹೇಶ ಅನಗೋಳ್ಕರ್, ಇವೆಂಟ್ ಚೇರ್ಮನ್ ಪಂಕಜ ಪವಾರ, ಅಶ್ವಿನ್ ಹುಬ್ಬಳಿ, ಶೀತಲ್ ಮುಂದಡಾ, ಜಗದೀಶ ಶಿಂಧೆ ಇದ್ದರು.