ಅಂಗವಿಕಲರು ಸರ್ಕಾರದ ಸವಲತ್ತು ಬಳಸಿಕೊಳ್ಳಿ

6 mlv 1
ಮಳವಳ್ಳಿಯಲ್ಲಿ ಮಂಗಳವಾರ ಆಯೋಜಿಸಿದ್ದ ಅಂಗವಿಕಲರ ದಿನಾಚರಣೆ ಕಾರ್ಯಮವನ್ನು ಹಿರಿಯ ಸಿವಿಲ್ ನ್ಯಾಯಾಧೀಶ ವಿ.ಮಾದೇಶ್ ಉದ್ಘಾಟಿಸಿದರು. ಕುಮಾರ್, ರಾಧಾ ಮಮತಾ ಶಿವಪೂಜೆ, ಸಚಿನ್ ಕುಮಾರ್ ಶಿವಪೂಜೆ, ಶಿವಲಿಂಗ ದಳವಾಯಿ ಇತರರಿದ್ದರು.
Published on

ಮಳವಳ್ಳಿ: ಸರ್ಕಾರ ಅಂಗವಿಕಲರಿಗಾಗಿಯೇ ಹಲವಾರು ಸವಲತ್ತುಗಳನ್ನು ಜಾರಿಗೆ ತಂದಿದ್ದು, ಅವುಗಳನ್ನು ಬಳಸಿಕೊಳ್ಳಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ವಿ. ಮಾದೇಶ್ ತಿಳಿಸಿದರು.

ಪಟ್ಟಣದ ಸ್ತ್ರೀ ಶಕ್ತಿ ಭವನದಲ್ಲಿ ಮಂಗಳವಾರ ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ ಹಾಗೂ ತಾಲೂಕು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಅಂಗವಿಕಲರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸರ್ಕಾರ ಅಂಗವಿಕಲರಿಗಾಗಿ ಜಾರಿಗೆ ತಂದಿರುವ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಂಬಂಧಪಟ್ಟವರು ಸ್ಪಂದಿಸದಿದ್ದರೇ ಕೂಡಲೇ ಕಾನೂನಿನ ನೆರವಿನ ಮೂಲಕ ತಮ್ಮ ಹಕ್ಕನ್ನು ಪಡೆದುಕೊಳ್ಳಬೇಕು ಎಂದರು.

ಅಂಗವಿಕಲ ಮತ್ತು ಹಿರಿಯ ನಾಗರಿಕರ ಕಲ್ಯಾಣ ಇಲಾಖೆಯ ಜಿಲ್ಲಾ ಯೋಜನಾಧಿಕಾರಿ ಪ್ರಭಾಕರ್ ಅವರು ಅಂಗವಿಕಲರಿಗೆ ಸರ್ಕಾರದಿಂದ ಸಿಗುವ ಸವಲತ್ತುಗಳ ಬಗ್ಗೆ ಸವಿವರವಾಗಿ ಮಾಹಿತಿ ನೀಡಿದರು.
ಸಿಡಿಒ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ನ್ಯಾಯಾಧೀಶೆ ರಾಧಾ ಮಮತಾ ಶಿವಪೂಜೆ, ಸಚಿನ್ ಕುಮಾರ್ ಶಿವಪೂಜೆ, ಪಿಎಸ್‌ಐ ಶಿವಲಿಂಗ ದಳವಾಯಿ, ಸಹಾಯಕ ಸರ್ಕಾರಿ ಅಭಿಯೋಜಕ ರವಿ ಸೆಂತಿಲ್, ವಕೀಲ ಮಲ್ಲಪ್ಪ, ಪುನರ್ವಸತಿ ತಾಲೂಕು ಸಂಯೋಜಕ ಮಹದೇವಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net