ಅಂಗವಿಕಲರು ಸರ್ಕಾರದ ಸವಲತ್ತುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು

ಅಂಗವಿಕಲರು ಸರ್ಕಾರದ ಸವಲತ್ತುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು
Published on

ಹೊಳೆನರಸೀಪುರ: ಕಳೆದ ಆರು ತಿಂಗಳ ಹಿಂದೆ ರೈಲಿನಲ್ಲಿ ಮೈಸೂರಿಗೆ ಪ್ರಯಾಣ ಬೆಳೆಸುತ್ತಿದ್ದ ವೇಳೆ ಕಾಲು ಜಾರಿ ಕೆಳಕ್ಕೆ ಬಿದ್ದು ಎರಡು ಕಾಲುಗಳನ್ನು ಕಳೆದುಕೊಂಡಿದ್ದ ತಾಲೂಕಿನ ದೊಡ್ಡ ಕಾಡನೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ದಾಳ ಗೌಡನಹಳ್ಳಿ ಗ್ರಾಮದ ನಿವಾಸಿ ಶಿವಣ್ಣ ಎಂಬವರಿಗೆ ಹಾಸನ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಅವರ ಕಚೇರಿ ಹಾಗೂ ತಾಲೂಕು ಪಂಚಾಯಿತಿ ವತಿಯಿಂದ ತಾಪಂ ಇ ಓ ಪಿ ಆರ್ ಗೋಪಾಲ್ ಅವರ ನೇತೃತ್ವದಲ್ಲಿ ವೀಲ್ ಚೇರ್ ವಿತರಿಸಲಾಯಿತು.

ಬಳಿಕ ತಾಪಂ ಇ ಓ ಪಿ ಆರ್ ಗೋಪಾಲ್ ಅವರು ಮಾತನಾಡಿ ಸರ್ಕಾರ ಅಂಗವಿಕಲರಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು ಪ್ರತಿಯೊಬ್ಬ ಅಂಗವಿಕಲರು ಸರ್ಕಾರದ ಸವಲತ್ತುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು. ತಾಲೂಕು ಪಂಚಾಯಿತಿ ವತಿಯಿಂದಲೂ ಸಹ ಶೇಕಡ ಐದರಷ್ಟು ಅನುದಾನದಲ್ಲಿ ಅರ್ಜಿ ಹಾಕಿದ ಎಲ್ಲಾ ಅಂಗ ವಿಕಲರಿಗೂ ದ್ವಿಚಕ್ರ ವಾಹನ ವೀಲ್ ಚೇರ್ ಕೈ ಮತ್ತು ಕಾಲು ಕಳೆದುಕೊಂಡ ಫಲಾನುಭವಿಗಳಿಗೆ ಪ್ಲಾಸ್ಟಿಕ್ ನಿಂದ ಕೂಡಿದ ವಸ್ತುಗಳು ಸೇರಿದಂತೆ ಬೇರೆಬೇರೆ ಸ್ಟ್ರಕ್ಚರ್ಸ್ ಗಳನ್ನು ಕೊಡಲಾಗುತ್ತದೆ ಇದೇ ತಿಂಗಳ ಜನವರಿ 15ರಂದು ಅಂಗವಿಕಲರ ಯೋಜನೆಯಡಿ 23 ಜನರಿಗೆ ತ್ರಿಚಕ್ರ ವಾಹನ ವಿತರಿಸಲಾಗುತ್ತಿದೆ ಇದನ್ನು ಅಂಗವಿಕಲ ಫಲಾನುಭವಿಗಳು ಸದುಪಯೋಗ ಮಾಡಿಕೊಳ್ಳಬೇಕೆಂದು ಸಲಹೆ ನೀಡಿದರು.

ಇದೇ ಸಂದರ್ಭದಲ್ಲಿ ಎಂ ಆರ್ ಡಬ್ಲ್ಯೂ ಕಾರ್ಯಕರ್ತ ಕೆ ಬಿ ಹರೀಶ್ ಪಿ ಡಿ ಓ ರಾಘವೇಂದ್ರ ದೊಡ್ಡ ಕಾಡನೂರು ಗ್ರಾಮ ಪಂಚಾಯಿತಿ ಪುನರ್ ವಸತಿ ಕಾರ್ಯ ಕರ್ತೆ ಭಾಗ್ಯ ಹೆಚ್ ಹೆಚ್, ಲೆಕ್ಕಾಧಿಕಾರಿ ಶಿವಕುಮಾರ್ ಎನ್ ಆರ್ ಎಲ್ ಎಂ ನ ವ್ಯವಸ್ಥಾಪಕ ನವೀನ್ ದಾಳ ಗೌಡನಹಳ್ಳಿ ಗ್ರಾಮದ ರವಿ ಶಿವರಾಂ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net