

ಶಿರಾ: ತಾಲೂಕಿನಲ್ಲಿ 6200 ಅಂಗವಿಕಲರಿದ್ದು, ಅವರೆಲ್ಲರಿಗೂ ವಿವಿಧ ಪರಿಕರಗಳನ್ನು ವಿತರಿಸುವ ವಿಶೇಷ ಯೋಜನೆ ರೂಪಿಸಿದ್ದೇನೆ. ಶಿರಾದಲ್ಲಿ ದೊಡ್ಡ ಮಟ್ಟದಲ್ಲಿ ಕಾರ್ಯಕ್ರಮ ಮಾಡಿ ಎಲ್ಲರಿಗೂ ಸವಲತ್ತು ಸಲಕರಣೆಗಳನ್ನು ನೀಡುತ್ತೇನೆ ಎಂದು ಶಾಸಕ ಟಿ.ಬಿ.ಜಯಚಂದ್ರ ಹೇಳಿದರು.
ನಗರದ ತಾಪಂ ಆವರಣದಲ್ಲಿ ಸೋಮವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಹಯೋಗದಲ್ಲಿ ಶಾಸಕರ ಸ್ಥಳಿಯ ಪ್ರದೇಶಾಭಿವೃದ್ಧಿ ಅನುದಾನದಲ್ಲಿ 20 ಲಕ್ಷ ವೆಚ್ಚದಲ್ಲಿ 174 ಅಂಗವಿಕಲರಿಗೆ ಎಲೆಕ್ಟ್ರಾನಿಕ್ ಹೊಲಿಗೆ ಯಂತ್ರ ವಿತರಣಾ ಕಾರ್ಯಕ್ರಮದಲ್ಲಿ ಹೊಲಿಗೆ ಯಂತ್ರ ವಿತರಿಸಿ ಮಾತನಾಡಿದರು.
ಸರ್ಕಾರ ಯಾವಾಗಲೂ ಅಂಗವಿಕಲರ ಜತೆ ಇದ್ದು, ನಾನೂ ನಿಮ್ಮ ಕಷ್ಟಕ್ಕೆ ಸ್ಪಂದಿಸುವ ಕೆಲಸ ಮಾಡುತ್ತೇನೆ. ಅಂಗವಿಕಲರಿಗೆ ಸ್ವಯಂ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಟೈಲರಿಂಗ್ ಮೆಷಿನ್ ವಿತರಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದೇನೆ. ಅಂಗವಿಕಲರು ಈ ಹೊಲಿಗೆ ಯಂತ್ರಗಳ ಪ್ರಯೋಜನ ಪಡೆದುಕೊಂಡು ಸ್ವಯಂ
ಉದ್ಯೋಗ ಮಾಡಬೇಕು ಎಂದರು.
ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ಚಿದಾನಂದಮೂರ್ತಿ ಮಾತನಾಡಿ, ಅಂಗವಿಕಲರಿಗೆ ಹೊಲಿಗೆ ಯಂತ್ರ ನೀಡುತ್ತಿರುವುದು ರಾಜ್ಯದಲ್ಲಿ ಮೊದಲು. ಇದು ಹೊಸ ಯೋಜನೆಯಾಗಿದ್ದು, ದೇಶಕ್ಕೆ ಮಾದರಿಯಾಗಿದೆ. ಮೊದಲ ಹಂತವಾಗಿ 74 ಜನರಿಗೆ ವಿತರಿಸಲಾಗಿದೆ ಎಂದರು.
ತಾಪಂ ಇಒ ಆರ್.ಹರೀಶ್ ಮಾತನಾಡಿ, ದ್ವನಿ ಇಲ್ಲದವರಿಗೆ ಸಹಾಯ ಮಾಡುವುದು ಮಹತ್ವ ಪೂರ್ಣ ಕಾರ್ಯಕ್ರಮ. ಅಂಗವಿಕಲರ ಆರ್ಥಿಕ, ಶೈಕ್ಷಣಿಕ ಅಭಿವೃದ್ಧಿಗೆ ನಾವೆಲ್ಲರೂ ಅವರ ಜತೆ ನಿಲ್ಲಬೇಕು. ಅವರು ಉತ್ತಮ ಜೀವನ ನಡೆಸಲು ಸೌಲಭ್ಯ ನೀಡಬೇಕು ಎಂದರು. ಎಂ.ಆರ್.ಡಬ್ಲ್ಯು ಚಿತ್ತಯ್ಯ ಮಾತನಾಡಿದರು. ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ನಾಗರಾಜು, ತಾಪಂ ಮಾಜಿ ಸದಸ್ಯೆ ಲಕ್ಷಿ$್ಮದೇವಮ್ಮ, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಗುಳಿಗೇನಹಳ್ಳಿ ನಾಗರಾಜು, ಕೆಪಿಸಿಸಿ ಅಲ್ಪಸಂಖ್ಯಾತರ ಘಟಕದ ರಾಜ್ಯ ಉಪಾಧ್ಯಕ್ಷ ಅಬ್ದುಲ್ಲಾ ಖಾನ್, ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಮಣಿಕಂಠ, ಬೆಸ್ಕಾಂ ಸಮಿತಿ ಸದಸ್ಯ ಲೋಕೇಶ್, ಮುಖಂಡರಾದ ಫಜಿಲ್, ಮಾಗೋಡು ಕಂಬಣ್ಣ,
ಜಗದೀಶ್, ರಿಹನ್ ಪಾಷಾ ಇದ್ದರು.