

ಮಳವಳ್ಳಿ: ಅಂಗವೈಕಲ್ಯ ಇದ್ದರೂ ಸಮಾಜದಲ್ಲಿ ಸ್ವಾಭಿಮಾನದ ಬದುಕು ನಡೆಸುವ ಅಂಗವಿಕಲರ ವಿಶೇಷ ಮನೋಭಾವವನ್ನು ಪ್ರೋತ್ಸಾಹಿಸಬೇಕಿದೆ ಎಂದು ತಹಸೀಲ್ದಾರ್ ಎಂ.ವಿಜಯಣ್ಣ ಹೇಳಿದರು.
ಪಟ್ಟಣದ ರೈತ ಸಮುದಾಯದಲ್ಲಿ ಮಂಗಳವಾರ ಆಯೋಜಿಸಿದ್ದ ವಿಶ್ವಮಾನವ ಅಂಗವಿಕಲರ ಒಕ್ಕೂಟವನ್ನು ಉದ್ಘಾಟಿಸಿ ಮಾತನಾಡಿದ ಅವರು, ಅಂಗವೈಕಲ್ಯ ಇದ್ದವರಿಗೆ ದೇವರೇ ವಿಶೇಷ ಪ್ರತಿಭೆ ನೀಡಿರುತ್ತಾನೆ. ಆದರೆ ಕುಟುಂಬ ಹಾಗೂ ಸಮಾಜದಲ್ಲಿನ ತಿರಸ್ಕಾರದಿಂದ ಅವರ ಮನಸ್ಥಿತಿ ಕುಗ್ಗಿಹೋಗಿರುತ್ತದೆ. ಅವರನ್ನು ಅನುಕಂಪದಿಂದ ಕಾಣದೇ ಅವರ ಆಸಕ್ತಿಗಳನ್ನು ಗ್ರಹಿಸಿ ಪ್ರೋತ್ಸಾಹಿಸುವ ಕೆಲಸ ಮಾಡಬೇಕು ಎಂದರು.
ಅಂಗವಿಕಲರ ಕುಂದುಕೊರತೆ ಆಲಿಸಲು ಮಾಸಾಂತ್ಯಕ್ಕೆ ಸಭೆ ಕರೆಯಲಾಗುವುದು ಎಂದು ತಿಳಿಸಿದರು.
ಪುರಸಭೆ ಅಧ್ಯಕ್ಷೆ ರಾಧಾ ನಾಗರಾಜು, ಉಪಾಧ್ಯಕ್ಷ ಎಂ.ಟಿ.ಪ್ರಶಾಂತ್, ಟಿಎಪಿಸಿಎಂಎಸ್ ಅಧ್ಯಕ್ಷ ಕೆ.ಎಸ್.ದ್ಯಾಪೇಗೌಡ, ಒಕ್ಕೂಟದ ಅಧ್ಯಕ್ಷ ರಮೇಶ್, ಗೌರವಾಧ್ಯಕ್ಷ ಚಿಕ್ಕಮರಿಗೌಡ, ಕಾರ್ಯದರ್ಶಿ ನಂದೀಶ್, ಮಮತಾ, ಶಿವನಂಜೇಗೌಡ, ಆರ್.ಎಸ್.ಮಹದೇವಪ್ಪ, ಜಯಂಶಂಕರ್, ದೊಡ್ಡಮರಿಗೌಡ, ಮಹದೇವು, ನಾಗರಾಜು, ಈರಪ್ಪ ಇದ್ದರು.