ಅಂಗವಿಕಲರಿಗೆ ತ್ರಿಚಕ್ರ ವಾಹನ ವಿತರಣೆ

h4-Mini Vidhan soudh
Published on

ಹುಬ್ಬಳ್ಳಿ: ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ ಆಯ್ಕೆಯಾದ ಜಿಲ್ಲೆಯ 36 ಅಂಗವಿಕಲರಿಗೆ ಇಲ್ಲಿನ ಮಿನಿ ವಿಧಾನಸೌಧ ಆವರಣದಲ್ಲಿ ಬುಧವಾರ ಜಿಲ್ಲಾ ಪಂಚಾಯಿತಿ ಸಿಇಒ ಸುಶೀಲಾ ಬಿ. ಅವರು ತ್ರಿಚಕ್ರ ವಾಹನಗಳನ್ನು ವಿತರಿಸಿದರು.

ಬಳಿಕ ಮಾತನಾಡಿ, 2018-2019ನೇ ಸಾಲಿಗೆ 38 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿತ್ತು. ಅದರಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಪಟ್ಟಿಯಲ್ಲಿ ಜ್ಯೇಷ್ಠತೆ ಹೊಂದಿರುವ ಉಳಿದ ಇಬ್ಬರನ್ನು ಆಯ್ಕೆ ಮಾಡಿ, ತ್ರಿಚಕ್ರ ವಾಹನ ವಿತರಿಸಲಾಗುವುದು. ಎಲ್ಲ ಫಲಾನುಭವಿಗಳ ಬಳಿ ವಾಹನ ಚಾಲನಾ ಕಲಿಕಾ ಪರವಾನಗಿ (ಎಲ್​ಎಲ್​ಆರ್) ಪತ್ರಗಳು ಇವೆ. ವಾಹನ ನೋಂದಣಿ ಸಮಯದಲ್ಲಿ ವಾಹನ ಚಾಲನಾ ಪತ್ರ(ಡಿಎಲ್)ಗಳನ್ನು ನೀಡಲಾಗುವುದು ಎಂದರು.

ಹಿರಿಯ ನಾಗರಿಕರು ಹಾಗೂ ಅಂಗವಿಕಲರ ಕಲ್ಯಾಣಾಧಿಕಾರಿ ಡಿ.ಎನ್. ಮೂಲಿಮನಿ, ತಾಪಂ ಇಒ ಗಂಗಾಧರ ಕಂದಕೋರ, ಅಣ್ಣಪ್ಪ ಅಂಕಲಗಿ, ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net