

ಕಲಬುರಗಿ: ಜಿ¯್ಲೆಯ ವಿಕಲಚೇತನರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಲ್ಲಿ ನಡೆದಿರುವ ಅಕ್ರಮಗಳ ಕುರಿತು ತನಿಖೆ ನಡೆಸಿ, ತಪ್ಪಿತಸ್ಥ ಅಧಿಕಾರಿ, ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ನವ ಕರ್ನಾಟಕ ಎಂಆರ್‌ಡಬ್ಲುö್ಯ, ಯುಆರ್‌ಡಬ್ಲುö್ಯ, ವಿಆರ್‌ಡಬ್ಲುö್ಯ ವಿಕಲಚೇತನರ ಗೌರವಧನ ಕಾರ್ಯಕರ್ತರ ಸಂಘದ ಸಂಸ್ಥಾಪಕ ಅಧ್ಯP್ಷÀ ಅಂಬಾಜಿ ಮೇಟಿ ಒತ್ತಾಯಿಸಿದರು.
ಜಿ¯್ಲÁ ಅಂಗವಿಕಲ ಕಲ್ಯಾಣಾಧಿಕಾರಿ ಇಲಾಖೆಯಲ್ಲಿ ಹಲವು ಅಕ್ರಮದಲ್ಲಿ ತೊಡಗಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು. ದೈಹಿಕ ವಿಕಲಚೇತನರು, ದೃಷ್ಟಿ ವಿಕಲಚೇತನರು ಹಾಗೂ ಹಿರಿಯ ನಾಗರಿಕರಿಗೆ ತಲುಪಬೇಕಾದ ಸೌಲಭ್ಯ ಒದಗಿಸದೆ ಅನ್ಯಾಯ ಮಾಡಲಾಗಿದೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ವಿವಿದೋz್ದÉÃಶ ಪುನರ್ವಸತಿ ಕಾರ್ಯಕರ್ತರು (ಎಂಆರ್‌ಡಬ್ಲುö್ಯ), ಗ್ರಾಮೀಣ ಪುನರ್ವಸತಿ ಕಾರ್ಯಕರ್ತರು (ವಿಆರ್‌ಡಬ್ಲುö್ಯ) ಮತ್ತು ನಗರ ಪುನರ್ವಸತಿ ಕಾರ್ಯಕರ್ತ(ಯುಆರ್‌ಡಬ್ಲುö್ಯ)ರು ಸೌಲಭ್ಯ ಕೇಳಿದರೆ ಕಿರುಕುಳ ನೀಡುತ್ತಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಲಾಗಿದೆ ಎಂದರು.
ನಗರದ ಸರ್ಕಾರಿ ಅಂಧ ಮಕ್ಕಳ (ಬಾಲಕರ) ವಸತಿ ನಿಲಯದ ನಾಲ್ವರು ವಿದ್ಯಾರ್ಥಿಗಳ ಮೇಲೆ ವಿನಾಕಾರಣ ಕ್ರಮ ಕೈಗೊಂಡು ಹೊರ ಹಾಕಲಾಗಿತ್ತು. ಹಳೇ ವಿಡಿಯೋ ಬಳಸಲಾಗಿತ್ತು. ಪುರಾವೆಯ ತಪಾಸಣೆ ನಡೆಸದೆ ಮಕ್ಕಳ ವಿರುದ್ಧ ಕ್ರಮ ಕೈಗೊಳ್ಳಲಾಗಿತ್ತು. ೨೦೨೪ನೇ ಸಾಲಿನಲ್ಲಿ ಸರ್ಕಾರಿ ಅಂಧ ಮಕ್ಕಳ ಶಾಲೆಯ ದುರಸ್ತಿ ನೆಪದಲ್ಲಿ ಆರು ಬಾರಿ ಬಿಲ್ ಎತ್ತಲಾಗಿದೆ. ಶಾಲೆಯ ಹಳೇ ಪೀಠೋಪಕರಣಗಳ ಹರಾಜು, ಶ್ರವಣ ಸಾಧನಗಳ ವಿತರಣೆಯಲ್ಲೂ ಅಕ್ರಮ ನಡೆಸಿರುವ ಶಂಕೆ ಇದೆ ಎಂದು ಅನುಮಾನ ವ್ಯಕ್ತಪಡಿಸಿದರು.