ಅಂಗವಿಕಲರಿಂದ ಅರ್ಜಿ ಆಹ್ವಾನ

Published on

ಚಾಮರಾಜನಗರ: ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ 2024-25ನೇ ಸಾಲಿಗೆ ಅಂಗವಿಕಲರಿಗೆ ಬ್ಯಾಟರಿ ಚಾಲಿತ ವೀಲ್ ಚೇರ್ ಸೌಲಭ್ಯ ನೀಡಲು ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿಯನ್ನು ಸೇವಾ ಸಿಂಧು ಪೋರ್ಟಲ್ ನಲ್ಲಿ ಜ.21 ರೊಳಗಾಗಿ ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಅಂಗವಿಕಲರ ಹಾಗೂ ಹಿರಿಯ ನಾಗರಿಕ ಸಬಲೀಕರಣ ಇಲಾಖೆ (ದೂ.ಸಂ 08226-223688) ಹಾಗೂ ಚಾಮರಾಜನಗರ ಎಂ.ಆರ್.ಡಬ್ಲ್ಯೂ ರಾಜೇಶ್ (ಮೊ.ಸಂ 8073716208), ಕೊಳ್ಳೇಗಾಲ ಹಾಗೂ ಹನೂರು ಎಂ.ಆರ್.ಡಬ್ಲ್ಯೂ ಕವಿರತ್ನ (ಮೊ.ಸಂ 7892715408), ಗುಂಡ್ಲುಪೇಟೆ ಎಂ.ಆರ್.ಡಬ್ಲ್ಯೂ ಮಂಜುಳ (ಮೊ.ಸಂ 9742423332), ಯಳಂದೂರು ಎಂ.ಆರ್.ಡಬ್ಲ್ಯೂ ಮಹದೇವಮ್ಮ (ಮೊ.ಸಂ 9740164149) ಇವರನ್ನು ಸಂಪರ್ಕಿಸುವಂತೆ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಮೀನಾಕ್ಷಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net