

ತರೀಕೆರೆ: ರೋಟರಿ ಸಂಸ್ಥೆ ವಿಶ್ವದಾದ್ಯಂತ 37 ಸಾವಿರಕ್ಕೂ ಹೆಚ್ಚು ಶಾಖೆ, 12 ಲಕ್ಷಕ್ಕೂ ಅಧಿಕ ಸದಸ್ಯರನ್ನು ಹೊಂದಿದೆ ಎಂದು ಸಂಸ್ಥೆ ಐಪಿಡಿಜಿ ಸತೀಶ್ ಮಾಧವನ್ ತಿಳಿಸಿದರು.
ರೋಟರಿ ಕ್ಲಬ್‌ನಿಂದ ಏರ್ಪಡಿಸಿದ್ದ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿ, ರೋಟರಿ ವರ್ಷಪೂರ್ತಿ ಸಮಾಜಮುಖಿ ಕಾರ್ಯದಲ್ಲಿ ತೊಡಗಿಕೊಳ್ಳಲಿದೆ. ತರೀಕೆರೆ ರೋಟರಿಯಲ್ಲಿ 85 ಸದಸ್ಯರಿದ್ದು, ಉತ್ತಮ ಚಿಂತನೆ ಅಳವಡಿಸಿಕೊಂಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಶಾಸಕ ಜಿ.ಎಚ್.ಶ್ರೀನಿವಾಸ್ ಮಾತನಾಡಿ, ರೋಟರಿ ಜಗತ್ತಿನಲ್ಲಿ ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ಅತಿ ಹೆಚ್ಚು ದೇಣಿಗೆ ನೀಡುವುದು ಮಾತ್ರವಲ್ಲ, ವಿದ್ಯಾರ್ಜನೆ, ನೆರವಿಗೆ ಬರಲಿದೆ ಎಂದರು.
ನೂತನ ಅಧ್ಯಕ್ಷ ಬಿ.ಪಿ.ರವಿಕುಮಾರ್ ಮಾತನಾಡಿ, ಪಟ್ಟಣದಲ್ಲಿ ವೃದ್ಧಾಶ್ರಮ, ರಕ್ತನಿಧಿ, ಕಿವುಡ ಮತ್ತು ಮೂಕರ ವಸತಿ ಶಾಲೆ ಸ್ಥಾಪಿಸುವ ಗುರಿ ಹೊಂದಲಾಗಿದೆ ಎಂದು ಮಾಹಿತಿ ನೀಡಿದರು.
ದ್ವಿತೀಯ ಪಿಯುಸಿ ಮತ್ತು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.
ರೋಟರಿ ಸಂಸ್ಥೆ ಪ್ರಮುಖರಾದ ಡಾ. ಜಿ.ಸಿ.ಶರತ್, ಬಿ.ಪಿ.ದಿನೇಶ್‌ಕುಮಾರ್, ಪಿ.ಬಿ.ಗೋವರ್ಧನ್, ಡಾ. ಎಸ್.ಎನ್.ಆಚಾರ್ಯ, ಡಾ. ಗಿರೀಶ್, ರಾಜಪ್ಪ, ಡಾ. ಬಿ.ಜಿ.ಚಂದ್ರಶೇಖರ್, ಡಾ. ಬಿ.ವಿ.ಕಿಶೋರ್‌ಕುಮಾರ್, ಡಾ. ಚನ್ನಬಸಪ್ಪ ಮತ್ತಿತರರಿದ್ದರು.