

ಹಾಸನ: ಇತ್ತೀಚೆಗೆ ಅಪಘಾತದಲ್ಲಿ ತೀವ್ರ ಗಾಯಗೊಂಡಿರುವ ತನಗೆ, ಶಸ್ತ್ರಚಿಕಿತ್ಸೆಗೆ ಹಣಕಾಸಿನ ಸಮಸ್ಯೆ ಎದುರಾಗಿದ್ದು ಯಾರಾದರೂ ದಾನಿಗಳು ಸಹಾಯಹಸ್ತ ಚಾಚುವಂತೆ ಕಾರ್ಲೆ ಬಳಿಯ ಸತ್ತಿಗರಹಳ್ಳಿ ನಿವಾಸಿ ಅರುಣ್ ಕುಮಾರ್ ಮನವಿ ಮಾಡಿದ್ದಾರೆ.
ತಾನು ಹುಟ್ಟುತ್ತಲೇ ವಿಕಲಚೇತನನಾಗಿದ್ದು, ಕಳೆದ 15 ದಿನಗಳ ಹಿಂದೆ ನಡೆದ ಅಪಘಾತದಲ್ಲಿ ಕಾಲುಗಳನ್ನು ಕಳೆದುಕೊಂಡಿದ್ದೇನೆ. ಕೂಲಿ ಮಾಡಿಕೊಂಡು ಬದುಕು ನಡೆಸುತ್ತಿರುವ ನಮ್ಮ ಕುಟುಂಬದಲ್ಲಿ ಈಗ ನಾನು ದುಡಿಯಲೇಬೇಕಾದ ಪರಿಸ್ಥಿತಿ ಇದೆ. ನಮ್ಮ ಕುಟುಂಬದಲ್ಲಿ ನನ್ನ ಸಹೋದರ ಕೂಡ ವಿಕಲಚೇತನನಾಗಿದ್ದು, ಕುಟುಂಬ ದಿನನಿತ್ಯ ಕಣ್ಣೀರು ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿ ಕಾಲಿನ ಶಸ್ತ್ರಚಿಕಿತ್ಸೆಗೆ ದಾನಿಗಳು ನೆರವಾದರೆ ನಾನು ದುಡಿಮೆ ಮಾಡಿ ಕುಟುಂಬ ಪೋಷಣೆ ಮಾಡಲು ಸಾಧ್ಯವಾಗುತ್ತದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಬೇಡಿಕೊಂಡರು.
ಈಗಾಗಲೇ ವೈದ್ಯರನ್ನು ಭೇಟಿ ಮಾಡಿ ಶಸ್ತ್ರಚಿಕಿತ್ಸೆಗೆ ಮನವಿ ಮಾಡಲಾಗಿದೆ. ಆದರೆ, ಅದಕ್ಕೆ ಆಗುವ ವೆಚ್ಚ ಭರಿಸುವ ಶಕ್ತಿ ಇಲ್ಲ. ಆದ್ದರಿಂದ ಯಾರಾದರೂ ದಾನಿಗಳು ಸ್ತ್ರಚಿಕಿತ್ಸೆಗೆ ಹಣ ಸಹಾಯ ನೀಡಿದರೆ ತುಂಬಾ ಅನುಕೂಲವಾಗಲಿದೆ ಎಂದು ವಿನಮ್ರವಾಗಿ ಮನವಿ ಮಾಡಿದರು.
ಸಮಾಜ ಸೇವಕ ಆರ್.ಜಿ. ಗಿರೀಶ್ ಮಾತನಾಡಿ, ಕುಟುಂಬವನ್ನು ಮುನ್ನಡೆಸಬೇಕಿರುವ ಇಬ್ಬರು ಯುವಕರು ಅಂಗವಿಕಲಾಗಿದ್ದಾರೆ. ಇವರ ಪರಿಸ್ಥಿತಿಯಿಂದ ಕುಟುಂಬ ದಿನನಿತ್ಯ ಸಂಕಷ್ಟ ಎದುರಿಸುತ್ತಿದೆ. ಹಣವನ್ನು ದುಂದುವೆಚ್ಚ ಮಾಡುವ ಬದಲು ಇಂತಹ ಕುಟುಂಬಕ್ಕೆ ನೆರವಾಗುವ ಮೂಲಕ ಮಾನವಿಯತೆ ಮರೆಯಬೇಕು ಎಂದು ಮನವಿ ಮಾಡಿದರು.
ಅರುಣ್ ಕುಮಾರ್ ಲಿಫ್ಟ್ ಆಪರೇಟ್ ಮಾಡುವ ತರಬೇತಿ ಕೂಡ ಪಡೆದಿದ್ದಾರೆ. ಆದರೆ, ಅಪಘಾತವಾಗಿದ್ದರಿಂದ ಸಲ್ಪವೂ ನಡೆಯಲಾಗದಂತಹ ಪರಿಸ್ಥಿತಿಗೆ ತಲುಪಿದ್ದಾರೆ. ಕಾಲಿನ ಶಸ್ತ್ರಚಿಕಿತ್ಸೆ ಮಾಡಿಸಿದರೆ ನಾನು ಕೆಲಸಕ್ಕೆ ಹೋಗುತ್ತೇನೆ ಎಂದಿದ್ದಾರೆ. ಯಾರಾದರೂ ಉದಾರ ಮನಸ್ಸುಳ್ಳ ದಾನಿಗಳು ಇದ್ದರೇ ವಿಕಲಚೇತನ ಅರುಣ್ ಕುಮಾರ್ ಶಸ್ತ್ರಚಿಕಿತ್ಸೆಗೆ ಧನ ಸಹಾಯ ಮಾಡುವಂತೆ ಕೋರಿದರು.
ಕೆ.ಎನ್. ಅರುಣ್ ಕುಮಾರ್ ಬ್ಯಾಂಕ್ ಖಾತೆ ವಿವರ. ಕೆನರಾ ಬ್ಯಾಂಕ್, ಕಾರ್ಲೆ ಶಾಖೆ, ಖಾತೆ ಸಂಖ್ಯೆ- 4346108002303, ಐಎಫ್‌ಎಸ್‌ಸಿ - ಸಿಎನ್‌ಆರ್‌ಬಿ0004346 ಹಣ ಜಮೆ ಮಾಡಬಹುದು. ಹೆಚ್ಚಿನ ವಿವರಗಳಿಗೆ ಮೊ. 9663011844 ಗೆ ಸಂಪರ್ಕಿಸಬಹುದಾಗಿದೆ.