ಅಂಗನವಾಡಿಯಲ್ಲಿ ಮಕ್ಕಳ ಸರ್ವಾಂಗೀಣ ಅಭಿವೃದ್ಧಿ

All round development of children in Anganwadi
ದೇವರಹಿಪ್ಪರಗಿ ಸಮೀಪದ ಕೋರವಾರ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಪಾಲಕರ ಹಾಗೂ ಪೋಷಕರ ಸಭೆಯಲ್ಲಿ ಗ್ರಾಪಂ ಸದಸ್ಯ ಭೀಮನಗೌಡ ಕುಳೇಕುಮಟಗಿ ಮಾತನಾಡಿದರು. ರಿಯಾನ್ ಬೇಗಂ ಕಂದಗಲ್, ಶಶಿಕಾಂತ ಸುಂಗಠಾಣ, ರಾಜಶೇಖರ ಛಾಯಗೋಳ, ಶಿವಪ್ಪ ತಾಳಿಕೋಟಿ, ಮಹಾದೇವ ರಾಮನಳ್ಳಿ, ದಯಾನಂದ ಗುತ್ತರಗಿಮಠ ಇತರರಿದ್ದರು.
Published on

ದೇವರಹಿಪ್ಪರಗಿ: ಸಮೀಪದ ಕೋರವಾರ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಪಾಲಕರ ಸಭೆಯನ್ನು ಗ್ರಾಮ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಉಜ್ವಲ ಸಂಸ್ಥೆ ಸಹಯೋಗದಲ್ಲಿ ನಡೆಸಲಾಯಿತು.

ಉಜ್ವಲ ಸಂಸ್ಥೆ ಶಾಲಾ ಪೂರ್ವ ಶಿಕ್ಷಣ ಸಂಪನ್ಮೂಲ ವ್ಯಕ್ತಿ ಶಶಿಕಾಂತ ಸುಂಗಠಾಣ ಮಾತನಾಡಿ, ಅಂಗನವಾಡಿಗಳಿಂದ ಫಲಾನುಭವಿಗಳಿಗೆ ಸಿಗುವಂತಹ ಸೌಲಭ್ಯಗಳು, ಅದರಲ್ಲೂ ಮುಖ್ಯವಾಗಿ 3ರಿಂದ 6ವರ್ಷದ ಮಕ್ಕಳಿಗೆ ಅತಿ ಅವಶ್ಯವಾಗಿರುವ ಶಾಲಾ ಪೂರ್ವ ಶಿಕ್ಷಣದಿಂದ ಮಕ್ಕಳಲ್ಲಿ ಆಗುವ ಬದಲಾವಣೆಗಳು, ಮಕ್ಕಳ ಸರ್ವಾಂಗೀಣ ಅಭಿವೃದ್ಧಿ ಶಾಲಾ ಪೂರ್ವ ಶಿಕ್ಷಣದಿಂದ ಮಾತ್ರ ಸಾಧ್ಯ. ಶಾಲಾ ಪೂರ್ವ ಶಿಕ್ಷಣ ಅನುಷ್ಠಾನಗೊಳ್ಳಲು ಅವಶ್ಯವಿರುವ ಸಾಮಗ್ರಿಗಳು ಮತ್ತು ಮಕ್ಕಳ ಸಮವಸ್ತ್ರಬೇಕೆಂದು ವಿನಂತಿಸಿಕೊಂಡರು.

ಗ್ರಾಪಂ ಮಾಜಿ ಅಧ್ಯಕ್ಷ ರಾಜಶೇಖರ ಛಾಯಗೋಳ ಮಾತನಾಡಿ, ಶಾಲಾ ಪೂರ್ವ ಶಿಕ್ಷಣಕ್ಕೆ ಬೇಕಾಗುವ ಸಾಮಾಗ್ರಿಗಳ ಖರೀದಿಗೆ ವೈಯಕ್ತಿಕವಾಗಿ 10ಸಾವಿರ ನೀಡುವುದಾಗಿ ಹೇಳಿದರು.

ಗ್ರಾಪಂ ಸದಸ್ಯರಾದ ಭೀಮನಗೌಡ ಕುಳೇಕುಮಟಗಿ ಮಾತನಾಡಿ, ಅಂಗನವಾಡಿಗಳು ಉತ್ತಮವಾಗಿ ಕಲಿಕಾ ಕೇಂದ್ರಗಳಾಗಿ ಪರಿವರ್ತನೆಯಾದರೆ ಮಕ್ಕಳು ಉತ್ತಮ ರೀತಿಯಲ್ಲಿ ಬೆಳೆಯುತ್ತಾರೆ. ಕಲಿಕೆ ಮಗುವಿಗೆ ಅವಶ್ಯಕತೆ ಆಗಿದೆ. ವೈಯಕ್ತಿಕವಾಗಿ ಅಂಗನವಾಡಿಯಲ್ಲಿ ದಾಖಲಿರುವ ಎಲ್ಲ ಮಕ್ಕಳಿಗೂ ಸಮವಸ್ತ್ರ ಕೊಡಿಸುತ್ತೇನೆ ಎಂದು ಹೇಳಿದರು.

ಅಂಗನವಾಡಿ ಶಿಕ್ಷಕಿ ಎನ್.ಐ. ಕುಳೇಕುಮಟಗಿ ಮಕ್ಕಳ ಪಾಲಕರು ಮಕ್ಕಳ ಆರೋಗ್ಯ ಮತ್ತು ಕಲಿಕೆಯಲ್ಲಿ ಆದ ಬದಲಾವಣೆಗಳನ್ನು ಸಭೆಯಲ್ಲಿ ತಿಳಿಸಿದರು.
ಬಾಲ ವಿಕಾಸ ಸಮಿತಿ ಅಧ್ಯಕ್ಷೆ ರಿಯಾನ್ ಬೇಗಂ ಕಂದಗಲ್ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಮಾಜಿ ಅಧ್ಯಕ್ಷ ಶಿವಪ್ಪ ತಾಳಿಕೋಟಿ, ಉಪಾಧ್ಯಕ್ಷ ಮಹಾದೇವ ರಾಮನಳ್ಳಿ, ಸದಸ್ಯರಾದ ದಯಾನಂದ ಗುತ್ತರಗಿಮಠ, ತಾಲೂಕು ರೈತ ಸಂಘದ ಅಧ್ಯಕ್ಷ ಈರಣ್ಣ ಕುಳೆಕುಮಟಗಿ, ಸೇರಿದಂತೆ ಅಂಗನವಾಡಿ ಕಾರ್ಯಕರ್ತರು, ಸಹಾಯಕಿಯರು, ಊರಿನ ಪ್ರಮುಖರು, ಮಕ್ಕಳ ಪಾಲಕರು ಭಾಗವಹಿಸಿದ್ದರು.

ಅಂಗನವಾಡಿ ಸಹಾಯಕಿ ಗೀತಾ ಘಾಟಗೆ ಸ್ವಾಗತಿಸಿದರು. ರೇಣುಕಾ ಬಿರಾದಾರ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net